ಸಾಮಾಜಿಕ ಮಾಧ್ಯಮ ಮಾನಸಿಕ ಆರೋಗ್ಯಕ್ಕೆ ಹಾನಿಕರ: ಡಾ. ವಿವೇಕ್ ಮೂರ್ತಿ

(ನ್ಯೂಸ್ ಕಡಬ) news kadaba ಅ. 14. ಸಾಮಾಜಿಕ ಮಾಧ್ಯಮಗಳು ಮಾನಸಿಕ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿದ್ದು, ಮಾನಸಿಕ ಆರೋಗ್ಯದ ಕುರಿತು ಗಮನಹರಿಸಬೇಕಾದ ತುರ್ತು ಅಗತ್ಯವಿದೆ ಎಂದು ಯುಎಸ್ ಸರ್ಜನ್ ಜನರಲ್ ಡಾ ವಿವೇಕ್ ಮೂರ್ತಿ ಅಭಿಪ್ರಾಯ ಪಟ್ಟಿದ್ದಾರೆ.

ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮತನಾಡಿದ ಅವರು, ಮಾನಸಿಕ ಆರೋಗ್ಯದ ಕುರಿತು ಕಾಳಜಿ ವಹಿಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ. ಅನೇಕ ಯುವಕರು ಆನ್‌ಲೈನ್‌ನಲ್ಲಿ ಸಂಪರ್ಕ ಹೊಂದಿದ್ದರೂ ಸಂಪರ್ಕ ಕಡಿತಗೊಂಡಿದೆ ಎಂದು ವರದಿ ಮಾಡುತ್ತಾರೆ, ಸಾಮಾಜಿಕ ಮಾಧ್ಯಮದಲ್ಲಿ ಆದರ್ಶ ಜೀವನವನ್ನು ಪ್ರದರ್ಶಿಸುವ ಒತ್ತಡವು ಈ ಭಾವನೆಗಳಿಗೆ ಕೊಡುಗೆ ನೀಡುತ್ತದೆ. ಇದೇ ವೇಳೆ, ಯಾವುದೇ ಜನರು ತಮ್ಮಲ್ಲಿರುವ ಮಾನಸಿಕ ಖಿನ್ನತೆ ಹಾಗೂ ಮಾನಸಿಕ ಸಮಸ್ಯೆಯನ್ನು ಹೇಳಿಕೊಳ್ಳಲು ಯಾರೂ ಮುಂದೆ ಬರುವುದಿಲ್ಲ. ಮಾನಸಿಕ ಸಮಸ್ಯೆಯ ಬಗ್ಗೆ ಹೇಳಿಕೊಂಡರೆ ತಮಗೆ ಅಪಮಾನವೆಂಬ ಕೀಳರಿಮೆಯಿಂದ ಅವರು ತಮ್ಮ ಕಾಯಿಲೆಗಳನ್ನು ಯಾರೊಂದಿಗೂ ಹೇಳಿಕೊಳ್ಳುವುದಿಲ್ಲ. ಅದರಿಂದ ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿಯುತ್ತಿವೆ. ತಮ್ಮಲ್ಲಿನ ಕೀಳರಿಮೆಯನ್ನು ಬಿಟ್ಟು ಜನರು ತಮ್ಮ ಮಾನಸಿಕ ಚಿಕಿತ್ಸೆಗಳತ್ತ ಮುಂದಾಗಬೇಕು ಎಂದು ತಿಳಿಸಿದರು.

Also Read  ಗೃಹರಕ್ಷಕರ ಸೇವೆ ಶ್ಲಾಘನೀಯ ➤ ಡಾ|| ರಾಜೇಂದ್ರ ಕೆ.ವಿ.

error: Content is protected !!
Scroll to Top