ಮಂಗಳೂರಿನ ಕದ್ರಿ ಉದ್ಯಾನವನ ► ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ.15. ಕದ್ರಿ ಉದ್ಯಾನವನದಲ್ಲಿ ಹೊಸದಾಗಿ ನಿರ್ಮಾಣಗೊಂಡ ಸಂಗೀತ ಕಾರಂಜಿ, ಲೇಸರ್ ಶೋ ಹಾಗೂ ಉದ್ಯಾನವನದ ನಿರ್ವಹಣೆಯ ಮೇಲ್ವಿಚಾರಣೆಗೆ ತಾತ್ಕಾಲಿಕ ನೆಲೆಯಲ್ಲಿ ಒಬ್ಬರು ವ್ಯವಸ್ಥಾಪಕರ ಅವಶ್ಯಕತೆಯಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಅಭ್ಯರ್ಥಿಗಳು ಪದವೀಧರರಾಗಿದ್ದು, ಕಂಪ್ಯೂಟರ್ ಜ್ಞಾನ ಹಾಗೂ ತೋಟಗಾರಿಕೆ ನರ್ಸರಿ ಅಥವಾ ಉದ್ಯಾನವನ ನಿರ್ವಹಣೆಯಲ್ಲಿ ಅನುಭವ ಹೊಂದಿರಬೇಕು. ನಿವೃತ್ತ ತೋಟಗಾರಿಕಾ ಹಾಗೂ ಕೃಷಿ ಅಧಿಕಾರಿಗಳಿಗೆ ಆದ್ಯತೆ ನೀಡಲಾಗುವುದು. ಅರ್ಜಿಯನ್ನು ಎಪ್ರಿಲ್ 10 ರೊಳಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ರಾಜ್ಯವಲಯ ಬೆಂದೂರ್‍ವೆಲ್, ಮಂಗಳೂರು ಇಲ್ಲಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂ: 0824-2444298, 0824-2423628 ಸಂಪರ್ಕಿಸಲು  ಪ್ರಕಟಣೆ ತಿಳಿಸಿದೆ.

Also Read  ಮಹಿಳಾ ಮತ್ತು ಪುರುಷ ಡ್ರೈವರ್‌ ಕೆಲಸಕ್ಕೆ ಅರ್ಜಿ ಅಹ್ವಾನ ➤ 1.37 ಲಕ್ಷ ಸ್ಯಾಲರಿಯ ಈ ಉದ್ಯೋಗದ ಬಗ್ಗೆ ನಿಮಗೆ ಗೊತ್ತೇ..?

error: Content is protected !!
Scroll to Top