ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ‘ಗಟ್ಟಿಮೇಳ’ ಹುಡುಗಿ..! – News Kadaba

ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ‘ಗಟ್ಟಿಮೇಳ’ ಹುಡುಗಿ..!

(ನ್ಯೂಸ್ ಕಡಬ) newskadaba.com ಅ. 11. ಇತ್ತೀಚೆಗೆ ಕಿರುತೆರೆ ಕಲಾವಿದರು ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡುತ್ತಿರುವುದು ಸಾಮಾನ್ಯವಾಗಿದೆ. ಇದೀಗ ಕಿರುತೆರೆ ನಟಿ ‘ಗಟ್ಟಿಮೇಳ’ ಖ್ಯಾತಿಯ ನಿಶಾ ರವಿಕೃಷ್ಣನ್​ ಸ್ಮಾಲ್​ ಸ್ಕ್ರೀನ್​ನಿಂದ ಸಿಲ್ವರ್​ ಸ್ಕ್ರೀನ್​ಗೆ ಎಂಟ್ರಿ ಕೊಟ್ಟಿದ್ದು, ಸದ್ಯ ಎಂ.ಸಿ ಚನ್ನಕೇಶವ ನಿರ್ದೇಶನದ ‘ಅಂಶು’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.


ಇದು ಮಹಿಳಾ ಪ್ರಧಾನ ಸೈಕೆಡೆಲಿಕ್​ ಥ್ರಿಲ್ಲರ್​ ಜಾನರ್​ ಚಿತ್ರವಾಗಿದೆ. ಅಂದಹಾಗೆ ಸೈಕೆಡೆಲಿಕ್​ ಎಂದರೆ ಭ್ರಮೆ ಉಂಟು ಮಾಡುವ ಅಥವಾ ಮನೋವಿಕೃತ ಎಂದರ್ಥ. ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ವಿಚಾರಗಳೇ ಚಿತ್ರಕ್ಕೆ ಸ್ಪೂರ್ತಿಯಾಗಿದ್ದು, ಅದನ್ನು ಕಮರ್ಷಿಯಲ್​ ಆಗಿ ಹೇಳುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ. ತಮಿಳಿನ ‘ದೂಡಿ’ ಹಾಗೂ ಕನ್ನಡದ ‘ರುದ್ರ ಗರುಡ ಪುರಾಣ’ ಚಿತ್ರಗಳ ಖ್ಯಾತಿಯ ಸುನೀಲ್​ ನರಸಿಂಹಮೂರ್ತಿ ಛಾಯಾಗ್ರಹಣ, ಕಾಲಿವುಡ್​ನ ಜಿ.ವಿ. ಪ್ರಕಾಶ್​ ಕುಮಾರ್​ ತಂಡದಲ್ಲಿ ಪಳಗಿರುವ ಕೆ.ಸಿ. ಬಾಲಸಾರಂಗನ್​ ಸಂಗೀತ ‘ಅಂಶು’ಗೆ ಇರಲಿದೆ. ಈಗಾಗಲೇ ಚಿತ್ರದ ಟೀಸರ್​, ಟ್ರೇಲರ್​ ಮತ್ತು ಹಾಡುಗಳು ರಿಲೀಸ್​ ಆಗಿದ್ದು, ಸದ್ಯ ಚಿತ್ರತಂಡ ಸಿನಿಮಾ ಬಿಡುಗಡೆಯ ಸಿದ್ಧತೆಯಲ್ಲಿದೆ.

Scroll to Top