ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಬಾಂಗ್ಲಾದ ಜೇಶೋರೇಶ್ವರಿ ದೇವಳದ ಕಾಳಿದೇವಿಗೆ ಮೋದಿ ನೀಡಿದ ಕಿರೀಟ ಕಳವು – News Kadaba

ಬಾಂಗ್ಲಾದ ಜೇಶೋರೇಶ್ವರಿ ದೇವಳದ ಕಾಳಿದೇವಿಗೆ ಮೋದಿ ನೀಡಿದ ಕಿರೀಟ ಕಳವು

(ನ್ಯೂಸ್ ಕಡಬ)newskadaba.com, ಅ. 11ಢಾಕಾ: 2021ರಲ್ಲಿ ಪ್ರಧಾನಿ ನರೇಂದ್ರ ಮೋದಿ ಬಾಂಗ್ಲಾದೇಶದ ಸತ್ಖಿರಾ ನಗರದ ಶ್ಯಾಮನಗರದಲ್ಲಿರುವ ಪ್ರಸಿದ್ಧ ಜೇಶೋರೇಶ್ವರಿ ಕಾಳಿ ದೇವಸ್ಥಾನಕ್ಕೆ ಕೊಡುಗೆಯಾಗಿ ನೀಡಿದ ಚಿನ್ನದ ಕಿರೀಟ ಕಳವಾಗಿದೆ. ಸ್ಥಳೀಯ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.

ಬಾಂಗ್ಲಾದೇಶ ಪ್ರವಾಸ ಕೈಗೊಂಡಿದ್ದ ನರೇಂದ್ರ ಮೋದಿ ಜೇಶೋರೇಶ್ವರಿ ಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ವೇಳೆ ಚಿನ್ನ ಮತ್ತು ಬೆಳ್ಳಿಯಿಂದ ಮಾಡಿದ ಈ ಕಿರೀಟವನ್ನು ಉಡುಗೊರೆಯಾಗಿ ನೀಡಿದ್ದರು. ಅಕ್ಟೋಬರ್‌ 10 ರಂದು ತಡರಾತ್ರಿ ಸುಮಾರು 2 ಗಂಟೆಗೆ ಕಿರೀಟವನ್ನು ಕಳವು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ದೇವಸ್ಥಾನದ ಅರ್ಚಕ ದಿಲೀಪ್‌ ಮುಖರ್ಜಿ ಪೂಜೆ ಸಲ್ಲಿಸಿ ಬಾಗಿಲು ಹಾಕಿ ತೆರಳಿದ ನಂತರ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ.

Scroll to Top