ಬೆಳ್ತಂಗಡಿ: ಆಕಾಶದಿಂದ ಭೂಮಿಗೆ ಬಿದ್ದ ಪ್ಯಾರಾಚೂಟ್ ಇದ್ದ ಯಂತ್ರ ► ಸ್ಥಳೀಯರಲ್ಲಿ ಆತಂಕ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಮಾ.14. ಆಕಾಶದಿಂದ ಪ್ಯಾರಾಚೂಟ್ ಇರುವಂತಹ ಯಂತ್ರವೊಂದು ಭೂಮಿಗೆ ಬಿದ್ದು, ಸ್ಥಳೀಯರನ್ನು ಆತಂಕಗೊಳಿಸಿದ ಘಟನೆ ಮಂಗಳವಾರದಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ ಸಮೀಪದ ಇರ್ವತ್ತೂರು ಎಂಬಲ್ಲಿ ನಡೆದಿದೆ.

ಎಡ್ತೂರಿನ ಕೃಷಿಕ ನಿರಂಜನ್ ಜೈನ್ ಎಂಬವರು ನೀರು ಬಿಡಲೆಂದು ತೋಟಕ್ಕೆ ತೆರಳಿದಾಗ ಪ್ಯಾರಾಚೂಟ್ ಇರುವ ಯಂತ್ರವೊಂದು ಕಂಡುಬಂದಿದೆ. ವಾಹನದ ಬ್ಯಾಟರಿಯನ್ನು ಹೋಲುವ ಈ ಯಂತ್ರದ ಜತೆಗೆ ಪುಟ್ಟ ಪ್ಯಾರಾಚೂಟ್ ಕೂಡಾ ಅಳವಡಿಸಲಾಗಿದ್ದು, ಅದರ ಪಕ್ಕದಲ್ಲೇ ತಯಾರಿಕಾ ಕಂಪನಿಯ ಹೆಸರನ್ನು ಬರೆಯಲಾಗಿತ್ತು. ಕೆಲಕಾಲ ಆತಂಕಗೊಂಡ ಸ್ಥಳೀಯರು ಸ್ಥಳಕ್ಕಾಗಮಿಸತೊಡಗಿದ್ದು, ಆ ಬಳಿಕ ಅಧಿಕಾರಿಗಳ ವರೆಗೆ ಮಾಹಿತಿ ರವಾನೆಯಾಗಿದೆ. ವಿಚಾರ ತಿಳಿದು ಪ್ರತಿಕ್ರಿಯೆ ನೀಡಿದ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವಿಜ್ಞಾನಿ ಸಿ.ಎನ್ ಪ್ರಭು, ಇದು ಭಾರತೀಯ ಹವಾಮಾನ ಇಲಾಖೆ ಹವಾಮಾನ ವೈಪರೀತ್ಯವನ್ನು ಮಾಪನ ಮಾಡುವ ಯಂತ್ರವಾಗಿದ್ದು, ಇಲಾಖೆ ಇಂತಹ ಯಂತ್ರಗಳನ್ನು ಆಗಾಗ್ಗೆ ಆಕಾಶಕ್ಕೆ ರವಾನಿಸುತ್ತಿರುತ್ತದೆ. ಪ್ಯಾರಾಚೂಟ್ ನಲ್ಲಿ ಸಮಸ್ಯೆಯಾದಾಗ ಇದು ಅರಣ್ಯ ಅಥವಾ ಸಮುದ್ರ ಪ್ರದೇಶದಲ್ಲಿ ಬೀಳುತ್ತದೆ. ಆಕಸ್ಮಿಕವಾಗಿ ಇದು ಜನವಸತಿ ಪ್ರದೇಶದಲ್ಲಿ ಬಿದ್ದಿರಬಹುದು. ಜನರು ಈ ಯಂತ್ರದ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದಿದ್ದಾರೆ.

Also Read  ಬಜೆಟ್‌ನಲ್ಲಿ ಕರಾವಳಿ ಭಾಗದ ಮೀನುಗಾರಿಕೆಗೆ ಬಂಪರ್    ➤ ಹಳೆ ಘೋಷಣೆಗಳಿಗೆ ಅನುದಾನ…!!!

error: Content is protected !!
Scroll to Top