(ನ್ಯೂಸ್ ಕಡಬ)newskadaba.com ಅ. 08.
ಬೇಕಾಗುವ ಸಾಮಾಗ್ರಿಗಳು:
ದಪ್ಪ ಅವಲಕ್ಕಿ
ರವೆ
ಮೊಸರು
ಶಾವಿಗೆ
ನೀರು
ಉಪ್ಪು(ರುಚಿಗೆ ತಕ್ಕಷ್ಟು)
ತುರಿದ ತೆಂಗಿನಕಾಯಿ
ಈರುಳ್ಳಿ, ಸಣ್ಣಗೆ ಹೆಚ್ಚಿದ್ದು
ಟೊಮೆಟೊ, ಹೆಚ್ಚಿದ್ದು
ಕೊತ್ತಂಬರಿ ಸೊಪ್ಪು
ಹಸಿಮೆಣಸಿನಕಾಯಿ,ಖಾರಕ್ಕೆ ತಕ್ಕಷ್ಟು
ಶುಂಠಿ, ಹೆಚ್ಚಿದ್ದು
ಎಣ್ಣೆ
ಮಾಡುವ ವಿಧಾನ:
ದಪ್ಪ ಅವಲಕ್ಕಿಯನ್ನು ನೀರಿನಲ್ಲಿ ತೊಳೆದು, ರವೆ, ಮೊಸರು ಸೇರಿಸಿ ಚೆನ್ನಾಗಿ ಕಲಸಿ ೧೦ ನಿಮಿಷ ಪಕ್ಕಕ್ಕಿಡಿ.
ಒಂದು ಬಾಣಲೆಯಲ್ಲಿ ಶಾವಿಗೆಯನ್ನು ೫ ನಿಮಿಷಗಳ ಕಾಲ ಹುರಿದು ಅವಲಕ್ಕಿ-ರವೆ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಕಲಸಿ.
ನಂತರ ನೀರು, ರುಚಿಗೆ ತಕ್ಕಷ್ಟು ಉಪ್ಪು, ತೆಂಗಿನ ತುರಿ ಸೇರಿಸಿ ಹಿಟ್ಟಿನ ಹದ ಸರಿಮಾಡಿಕೊಳ್ಳಿ.ಉತ್ತಪ್ಪ ಹಿಟ್ಟು ಈಗ ತಯಾರಾಗಿದೆ. ಬಿಸಿ ಕಾವಲಿಗೆ ಎಣ್ಣೆ ಸವರಿ, ಹಿಟ್ಟನ್ನು ಕಾವಲಿ ಮೇಲೆ ಸಮನಾಗಿ ಹರಡಿ. ನಂತರ ಈರುಳ್ಳಿ,ಟೊಮ್ಯಾಟೊ, ಕೊತ್ತಂಬರಿ ಸೊಪ್ಪು,ಹಸಿಮೆಣಸು,ಶುಂಠಿ ಹಾಗೂ ೧ ಚಮಚ ಎಣ್ಣೆಯನ್ನು ಉತ್ತಪ್ಪದ ಮೇಲ್ಗಡೆ ಸಮಾನಾಗಿ ಹರಡಿ.
ಈಗ ಎರಡೂ ಬದಿಯನ್ನು ಮಧ್ಯಮ ಉರಿಯಲ್ಲಿ ಚೆನ್ನಾಗಿ ಬೇಯಿಸಿದರೆ ಶಾವಿಗೆ ಉತ್ತಪ್ಪ ರೆಡಿ!