ಅಕ್ರಮ ಪಾಕ್ ಕುಟುಂಬಗಳಿಗೆ ಸಹಾಯ ಮಾಡಿದ ಪ್ರಮುಖ ಆರೋಪಿ ಬಂಧನ

(ನ್ಯೂಸ್ ಕಡಬ)newskadaba.com ಬೆಂಗಳೂರು, ಅ. 07. ನಗರದ ಪ್ರಜೆಗಳ ಅಕ್ರಮ ತಂಗಿದ್ದ ಪ್ರಕರಣದಲ್ಲಿ ಜಿಗಣಿ ಪೊಲೀಸರು ಪ್ರಮುಖ ಆರೋಪಿಯನ್ನು ಶನಿವಾರ ಬಂಧಿಸಿದ್ದಾರೆ.

ಆರೋಪಿಯನ್ನು ಮುಂಬೈ ಮೂಲದ ಪರ್ವೇಜ್ (57) ಎಂದು ಗುರುತಿಸಲಾಗಿದೆ. ಎರಡು ಕುಟುಂಬಗಳು ಪರ್ವೇಜ್‌ನ ವಿವರಗಳನ್ನು ಬಹಿರಂಗಪಡಿಸಿದ ನಂತರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಕಲಿ ಆಧಾರ್ ಕಾರ್ಡ್‌ಗಳು, ಭಾರತೀಯ ಪಾಸ್‌ಪೋರ್ಟ್‌ಗಳು, ಪ್ಯಾನ್ ಕಾರ್ಡ್‌ಗಳು ಮತ್ತು ಡ್ರೈವಿಂಗ್ ಲೈಸೆನ್ಸ್‌ ಗಳನ್ನು ಪಡೆಯಲು ಪಾಕಿಸ್ತಾನಿ ಪ್ರಜೆಗಳಿಗೆ ಸಹಾಯ ಮಾಡಿದ ಆರೋಪ ಭಾರತೀಯ ಪರ್ವೇಜ್ ಮೇಲಿದೆ.

 

Scroll to Top