ಉಡುಪಿಯಲ್ಲಿ ಮೇಘಸ್ಪೋಟ:10ಕ್ಕೂ ಹೆಚ್ಚು ಮನೆ ಮುಳುಗಡೆ

(ನ್ಯೂಸ್ ಕಡಬ)newskadaba.com, ಉಡುಪಿ ಅ. 07. ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಕಬ್ಬಿನಾಲೆ ಪ್ರದೇಶದಲ್ಲಿ ಭಾನುವಾರ ಮಧ್ಯಾಹ್ನ ಅತ್ಯಲ್ಪ ಅವಧಿಯಲ್ಲಿ ಧಾರಾಕಾರ ಮಳೆಯಾಗಿದ್ದು, ಮೇಘ ಸ್ಪೋಟವಾಗಿರಬಹುದು ಎಂದು ಹೇಳಲಾಗುತ್ತಿದೆ. 2.25 ಗಂಟೆಯಲ್ಲಿ 18 ಸೆಂ.ಮೀ. ಮಳೆಯಾದ ಪರಿಣಾಮ, ಬಮ್ಮಗುಂಡಿ ನದಿಯಲ್ಲಿ ಹಠಾತ್ ಪ್ರವಾಹ ಕಾಣಿಸಿಕೊಂಡಿದೆ. ಇದರಿಂದ ಹೆಬ್ರಿ ತಾಲೂಕಿನ ಮು ದ್ರಾಡಿ ಗ್ರಾ.ಪಂ. ವ್ಯಾಪ್ತಿಯ ಬಲ್ಲಾಡಿ ಯಲ್ಲಿ 10ಕ್ಕೂ ಹೆಚ್ಚು ಮನೆಗಳು ಸಂ ಪೂರ್ಣ ಮುಳುಗಡೆಯಾಗಿವೆ. ಜಮನಿಗೆ ನೀರು ನುಗ್ಗಿದೆ 2 ಕಾರು, ಎರಡು ಬೈಕ್‌ಗಳು ಸೇರಿ 4 ವಾಹನಗಳು ಪ್ರವಾಹದಲ್ಲಿ ಕೊಚ್ಚಿಹೋಗಿದೆ. ಆದರೆ ಯಾ ವುದೇ ಪ್ರಾಣ ಹಾನಿ ಸಂಭವಿಸಿಲ್ಲ.

Also Read  ಚಂದ್ರಯಾನ-3 ಬಗ್ಗೆ ಅವಹೇಳನಕಾರಿ ಪೋಸ್ಟ್ - ನಟ ಪ್ರಕಾಶ್ ರಾಜ್ ವಿರುದ್ದ ದೂರು ದಾಖಲು

ಕಬ್ಬಿನಾಲೆ ತಿಂಗಳಮಕ್ಕಿ ಪ್ರದೇಶಗಳಲ್ಲಿ ಮೇಘ ಸ್ಫೋಟವಾಗಿದೆಯೇ ಅಥವಾ ಗುಡ್ಡ ಜರಿದಿದೆಯೇ ಎಂಬ ಕುರಿತು ಖಚಿತ ಮಾಹಿತಿ ಲಭಿಸಿಲ್ಲ. ಹಠಾತ್ ನೆರೆಯಿಂದ ನಾಗರಿಕರು ಆತಂಕಗೊಂಡಿದ್ದಾರೆ. ಈ ಪರಿಸದಲ್ಲಿ ಭಾರಿ ಗಾಳಿಗೆ ಮರಗಳು ಬಿದ್ದಿದ್ದು 25ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ಧರೆಗುರುಳಿವೆ.. ಬಮ್ಮಗುಂಡಿ ನದಿಯ ಸುತ್ತಮುತ್ತಲಿನ ಪ್ರದೇಶದ ಒಟ್ಟು 150 ಎಕರೆ ಕಟಾವಿಗೆ ಬಂದಿದ್ದ ಬತ್ತ, ರಬ್ಬರ್, ಅಡಕೆ, ತೆಂಗು, ಬಾಳೆ ತೋಟ ಸಂಪೂರ್ಣ ನಾಶವಾಗಿದೆ.

error: Content is protected !!
Scroll to Top