ಕಾಡಾನೆ ದಾಳಿ- ವ್ಯಕ್ತಿ ಮೃತ್ಯು..!

(ನ್ಯೂಸ್ ಕಡಬ) newskadaba.com ಕೊಡಗು, ಜೂ. 11. ಕಾಡಾನೆ ದಾಳಿಯಿಂದ ಗಂಭೀರ ಗಾಯಗೊಂಡಿದ್ದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಇಲ್ಲಿನ ತಿತಿಮತಿ ರಸ್ತೆಯಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಪೊನ್ನಂಪೇಟೆ ತಾಲೂಕಿನ ಮಾರಿಯಮ್ಮ ಕಾಲೋನಿಯ ಚಾಮ (50) ಎಂದು ಗುರುತಿಸಲಾಗಿದೆ. ಇವರು ಇಂದು ಬೆಳಿಗ್ಗೆ 7 ಗಂಟೆಯ ಸುಮಾರಿಗೆ ಬೈಕಿನಲ್ಲಿ ಕೋಣನ ಕಟ್ಟೆಯಿಂದ ಮರಪಾಲ ರಸ್ತೆಯಲ್ಲಿ ತೆರಳುತ್ತಿದ್ದ ವೇಳೆ ದಿಢೀರ್ ಆಗಿ ಆನೆಯೊಂದು ಎದುರಿಗೆ ಬಂದಿದ್ದು, ಈ ವೇಳೆ ಬೈಕ್ ನ ಹಿಂಬದಿ ಕೂತಿದ್ದ ಇಬ್ಬರು ಓಡಿದ್ದಾರೆ. ಆದರೆ ಚಾಮ ಅವರು ಬೈಕ್ ನಿಂದ ಇಳಿಯುವಷ್ಟರಲ್ಲಿ ಆನೆ ದಾಳಿ ಮಾಡಿದೆ. ಪರಿಣಾಮ ಚಾಮ ಅವರು ಗಂಭೀರ ಗಾಯಗೊಂಡಿದ್ದು, ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

 

Scroll to Top