(ನ್ಯೂಸ್ ಕಡಬ)newskadaba.com, ನ್ಯೂಯಾರ್ಕ್ ಅ. 05. ಮಧ್ಯಪ್ರಾಚ್ಯ ದೇಶದಲ್ಲಿ ನಡೆಯುತ್ತಿರುವ ಯುದ್ದದ ವಾತಾರಣ ಕಡಿಮೆ ಮಾಡಲು ಇಸ್ರೇಲ್ ಮತ್ತು ಇರಾನ್ ತಕ್ಷಣ ಯುದ್ಧದ ವಾತಾವರಣ ಅಂತ್ಯಗೊಳಿಸಬೇಕು ಎಂದು ವಿಶ್ವಸಂಸ್ಥೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.ಜೊತೆಗೆ ಅಮೆರಿಕಾ, ಇಂಗ್ಲೆಂಡ್ ಮತ್ತು ಜರ್ಮನಿಯನ್ನು ಒಳಗೊಂಡಿರುವ ಜಿ-7 ದೇಶಗಳು ಮದ್ಯ ಪ್ರಾಚ್ಯ ದೇಶಗಳ ವಿಷಯದಲ್ಲಿ “ಸಂಯಮ”ದಿಂದ ವರ್ತಿಸಬೇಕು ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಅಂಟೋನಿಯೋ ಗುಟೆರೆಸ್ ಹೇಳಿದ್ದಾರೆ.
ಕಳೆದ ಏಳು ದಿನಗಳಲ್ಲಿ, ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಅವರನ್ನು ಹತ್ಯೆ ಮಾಡಲಾಗಿದೆ, ಇಸ್ರೇಲ್ ಲೆಬನಾನ್ ಮೇಲೆ ನೆಲದ ಆಕ್ರಮಣ ಆರಂಭವಾಗಿದೆ. ಇರಾನ್ ಇಸ್ರೇಲ್ ಮೇಲೆ ಸುಮಾರು ೨೦೦ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಂತರ ಬಿಗುವಿನ ವಾತಾವರಣ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಈ ಸೂಚನೆ ನೀಡಿದ್ದಾರೆ.೫೦೦ ಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡ ಹಿಜ್ಬುಲ್ಲಾ ದಾಳಿಗೆ ಪ್ರತಿಯಾಗಿ ಇಸ್ರೇಲ್ ಸೇನೆ ಪ್ರತಿದಾಳಿ ನಡೆಸಲಾಗುತ್ತಿದೆ. ಅದಕ್ಕೂ ಒಂದು ವಾರದ ಮೊದಲು, ಗುಂಪನ್ನು ಗುರಿಯಾಗಿಸಿಕೊಂಡು ವಾಕಿ-ಟಾಕಿ ಮತ್ತು ಪೇಜರ್ ಸ್ಫೋಟಗಳ ಸರಣಿ ಕನಿಷ್ಠ ೩೨ ಮಂದಿ ಪಟ್ಟು ಮತ್ತು ೩೦೦೦ ಕ್ಕೂ ಹೆಚ್ಚು ಜನರು ಗಾಯಗೊಂಡರು. ನಸ್ರಲ್ಲಾ ಅವರ ಹತ್ಯೆಯ ನಂತರ ಉಭಯ ದೇಶಗಳನ್ನು ಬಿಗಿವಿನ ವಾತಾವರಣ ನಿರ್ಮಾಣವಾಗಿದೆ. ಸಾಮಾನ್ಯ ಸಭೆಯ ಹೊರತಾಗಿ ೨೧ ದಿನಗಳ ಕದನ ವಿರಾಮಕ್ಕಾಗಿ ಸೂಚನೆ ನೀಡಿಲಾಗಿದೆ. ಇಸ್ರೇಲ್‌ನ ಯುಎನ್ ರಾಯಭಾರಿ ಡ್ಯಾನಿ ಡ್ಯಾನನ್ ಪ್ರತಿಕ್ರಿಯೆ ನೀಡಿ ವಿಶ್ವಸಂಸ್ಥೆಯ ಆಲೋಚನೆಗಳಿಗೆ ಇಸ್ರೇಲ್ ಮುಕ್ತವಾಗಿದೆ ಎಂದು ತಿಳಿಸಿದ್ಧಾರೆ.