ದಸರಾ ವಿಶೇಷ: ಕರ್ನಾಟಕ ಶೈಲಿಯ ಜೋಳದ ತಾಲಿಪಟ್ಟು

(ನ್ಯೂಸ್ ಕಡಬ)newskadaba.com ಅ. 05. 

ಬೇಕಾಗುವ ಸಾಮಗ್ರಿಗಳು:                 

ಜೋಳದ ಹಿಟ್ಟು – ಒಂದು ಕಪ್
ಗೋಧಿ ಹಿಟ್ಟು – 50 ಗ್ರಾಂ
ಕಡಲೆ ಹಿಟ್ಟು – 50 ಗ್ರಾಂ
ಜೀರಿಗೆ – ಅಗತ್ಯಕ್ಕೆ ತಕ್ಕಷ್ಟು
ಅರಶಿನ – ಸ್ವಲ್ಪ
ಶುಂಠಿ ಬೆಳ್ಳುಳ್ಳಿ ಪೇಸ್ಟ್ – ಬೇಕಾದಷ್ಟು
ಹೆಚ್ಚಿದ ಹಸಿರು ಮೆಣಸಿನಕಾಯಿ – 3
ಖಾರದ ಪುಡಿ – ಅಗತ್ಯಕ್ಕೆ ತಕ್ಕಷ್ಟು
ಹೆಚ್ಚಿದ ಈರುಳ್ಳಿ – 1
ಹೆಚ್ಚಿದ ಕ್ಯಾರೆಟ್ – 1
ಕರಿಬೇವು – ಸ್ವಲ್ಪ
ಹೆಚ್ಚಿದ ಕೊತ್ತಂಬರಿ – 1 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು
ಮಾಡುವ ವಿಧಾನ:
* ಮೊದಲಿಗೆ ಒಂದು ಪಾತ್ರೆಗೆ ಜೋಳದ ಹಿಟ್ಟು, ಗೋಧಿ ಹಿಟ್ಟು, ಕಡಲೆ ಹಿಟ್ಟು, ಜೀರಿಗೆ, ಅರಶಿನ, ಉಪ್ಪು, ಹಸಿಮೆಣಸಿನ ಕಾಯಿ, ಖಾರದ ಪುಡಿ, ಈರುಳ್ಳಿ, ಕೊತ್ತಂಬರಿ ಪುಡಿ, ಕೊತ್ತಂಬರಿ ಸೊಪ್ಪು ಹಾಕಿ ಕಲಸಿಕೊಳ್ಳಿ.
* ಬಳಿಕ ಇದಕ್ಕೆ ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಕಲಸಿದ ಬಳಿಕ ಹತ್ತು ನಿಮಿಷ ಹಾಗೆಯೇ ಬಿಡಿ.
* ಇದಾದ ಬಳಿಕ ಹಿಟ್ಟನ್ನು ತೆಗೆದುಕೊಂಡು ಸಣ್ಣ ಸಣ್ಣ ಉಂಡೆಯನ್ನಾಗಿ ಮಾಡಿಕೊಳ್ಳಿ.
* ನಂತರ ಬಾಳೆ ಎಲೆಯ ಮೇಲೆ ಎಣ್ಣೆ ಹಚ್ಚಿಕೊಂಡು ಅದರ ಮೇಲೆ ಉಂಡೆಯನ್ನಿಟ್ಟು ಹಿಟ್ಟನ್ನು ರೊಟ್ಟಿಯ ರೀತಿ ತಟ್ಟಿಕೊಳ್ಳಿ.
* ಈಗ ಗ್ಯಾಸ್ ಮೇಲ್ ಕಾವಲಿ ಕಾಯಲು ಇಟ್ಟು ಕಾದ ಬಳಿಕ ತಟ್ಟಿದ ತಾಲಿಪಟ್ಟನ್ನು ಕಾವಲಿಗೆ ಹಾಕಿ ಎರಡೂ ಕಡೆ ಕಾಯಿಸಿಕೊಂಡರೆ ಜೋಳದ ತಾಲಿಪಟ್ಟು ಸವಿಯಲು ಸಿದ್ಧ.
* ಇದಕ್ಕೆ ಕಾಯಿ ಚಟ್ನಿ, ಹುರಿಗಡಲೆ ಚಟ್ನಿ, ಟೊಮೆಟೋ ಚಟ್ನಿ ಪರ್ಫೆಕ್ಟ್ ಕಾಂಬಿನೇಷನ್ ಎನ್ನಬಹುದು.

Also Read  ಶ್ರೀ ತಾಯಿ ಚಾಮುಂಡೇಶ್ವರಿ ನೆನೆಯುತ್ತಾ ಇಂದಿನ ದಿನ ಭವಿಷ್ಯವನ್ನು ತಿಳಿದುಕೊಳ್ಳಿ ಈ 8 ರಾಶಿಯವರಿಗೆ ಶುಭಫಲ ದೊರೆಯುತ್ತದೆ

 

error: Content is protected !!
Scroll to Top