(ನ್ಯೂಸ್ ಕಡಬ)newskadaba.com ಅ. 04.
ಬೇಕಾಗುವ ಸಾಮಾಗ್ರಿಗಳು
- 1 ಕಪ್ ಅಕ್ಕಿ
- 1 ಕಪ್ ಅಣಬೆ
- 4 ಈರುಳ್ಳಿ ಹೂವು (ಸಾಂಬಾರು ಈರುಳ್ಳಿ)
- 2 ಲವಂಗ
- 1/2 ಇಂಚಿನ ಚೆಕ್ಕೆ
- 2 ಏಲಕ್ಕಿ
- 1 ಪಲಾವ್ ಎಲೆ
- 1 ಚಮಚ ಗರಂ ಮಸಾಲ
- 1 ಚಮಚ ಜೀರಿಗೆ ಪುಡಿ
- ಎಣ್ಣೆ, ಉಪ್ಪು
ಮಾಡುವ ವಿಧಾನ:
- ಅಕ್ಕಿಯನ್ನು ಶುದ್ಧಗೊಳಿಸಿ ತೊಳೆಯಬೇಕು. ಬಿಸಿ ನೀರಿನಲ್ಲಿ 10 ನಿಮಿಷ ನೆನೆಸಬೇಕು.
- ಸಾಂಬಾರು ಈರುಳ್ಳಿ (ಬಿಳಿ ಹೂವನ್ನು ಮತ್ತು ಹಸಿರು ಕಡ್ಡಿಯನ್ನು ಪ್ರತ್ಯೇಕವಾಗಿ ಕತ್ತರಿಸಿ) ಒಂದೆಡೆ ಇಟ್ಟುಕೊಳ್ಳಬೇಕು.
- ಎಣ್ಣೆ ಕಾಯಿಸಿ ಅದರಲ್ಲಿ ಈರುಳ್ಳಿಯ ಬಿಳಿ ಹೂವು, ಲವಂಗ, ಚೆಕ್ಕೆ, ಏಲಕ್ಕಿ ಮತ್ತು ಪಲಾವ್ ಎಲೆಯನ್ನು ಹುರಿದುಕೊಂಡು ಮಶ್ರೂಮ್ ಹಾಕಬೇಕು. ಈಗ ಜೀರಿಗೆ ಪುಡಿ ಮತ್ತು ಗರಂ ಮಸಾಲಾ ಪುಡಿಯನ್ನು ಬೆರೆಸಬೇಕು.
- ಅಕ್ಕಿಯನ್ನು ಹಾಕಿ ಚೆನ್ನಾಗಿ ತಿರುಗಿಸಬೇಕು.
- ಎರಡು ಕಪ್ ಬಿಸಿ ನೀರನ್ನು ಅಕ್ಕಿ ಮಿಶ್ರಣಕ್ಕೆ ಹಾಕಿ ಈರುಳ್ಳಿಯ ಹಸಿರು ಭಾಗ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ತಿರುಗಿಸಬೇಕು. ಮುಚ್ಚುಳ ಮುಚ್ಚಿ ಬೇಯಿಸಿದರೆ ಮಶ್ರೂಮ್ ಪಲಾವ್ ತಿನ್ನಲು ರೆಡಿಯಾಗಿರುತ್ತೆ.