ವಿಶ್ವದ ಎರಡನೆ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಮಾರ್ಕ್ ಝುಕರ್ ಬರ್ಗ್

(ನ್ಯೂಸ್ ಕಡಬ)newskadaba.com ಕ್ಯಾಲಿಫೋರ್ನಿಯ, ಅ.04.  ಮೆಟಾ ಪ್ಲಾಟ್ ಫಾರ್ಮ್ಸ್ ಇಂಕ್ ಷೇರು ಮೌಲ್ಯ ಏರುತ್ತಲೇ ಹೋಗುತ್ತಿರುವುದರಿಂದ ಅಮೆಝಾನ್ ಒಡೆಯ ಜೆಫ್ ಬೆಝೋಸ್ ರನ್ನು ಹಿಂದಿಕ್ಕಿರುವ ಮಾರ್ಕ್ ಝುಕರ್ ಬರ್ಗ್, ವಿಶ್ವದ ಎರಡನೆ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.


ಬ್ಲೂಮ್ ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, ಮೆಟಾವರ್ಸ್ ನ ಷೇರು ಮೌಲ್ಯವು ಇತ್ತೀಚಿನ ತಿಂಗಳುಗಳಲ್ಲಿ ಏರಿಕೆ ಕಾಣುತ್ತಿರುವುದರಿಂದ, ಅದರ ಒಟ್ಟಾರೆ ಮೌಲ್ಯವು 206.2 ಬಿಲಿಯನ್ ಡಾಲರ್ ದಾಟಿದೆ. ಇದರಿಂದಾಗಿ, ಮಾರ್ಕ್ ಝುಕರ್ ಬರ್ಗ್ ಆಸ್ತಿ ಮೌಲ್ಯವು ಅಮೆಝಾನ್ ಇಂಕ್ ಒಡೆಯ ಬೆಝೋಸ್ ಗಿಂತ $ 1.1 ಬಿಲಿಯನ್ ನಷ್ಟು ಹೆಚ್ಚಾಗಿದೆ. ಅಲ್ಲದೆ, ಟೆಸ್ಲಾ ಇಂಕ್ ಒಡೆಯ ಎಲಾನ್ ಮಸ್ಕ್ ಗಿಂತ $ 50 ಬಿಲಿಯನ್ ಹಿಂದಿದೆ. ಮೆಟಾದ ಸಹ ಸಂಸ್ಥಾಪಕ ಹಾಗೂ ಕಾರ್ಯಕಾರಿ ಅಧಿಕಾರಿಯಾದ 40 ವರ್ಷ ವಯಸ್ಸಿನ ಮಾರ್ಕ್ ಝುಕರ್ ಬರ್ಗ್, ಈ ವರ್ಷದ ಶ್ರೀಮಂತಿಕೆಯ ಸೂಚ್ಯಂಕದಲ್ಲಿ 4 ಸ್ಥಾನಗಳನ್ನು ಪಡೆದಿದ್ದಾರೆ.‌

 

 

error: Content is protected !!

Join the Group

Join WhatsApp Group