ಸ್ವೀಟ್‌ ಕಾರ್ನ್ ಲಾಲಿಪಾಪ್

(ನ್ಯೂಸ್ ಕಡಬ) newskadaba.com ಅ. 02.  

ಬೇಕಾಗುವ ಪದಾರ್ಥಗಳು…                   

  • ಆಲೂಗಡ್ಡೆ- 1-2
  • ಸ್ವೀಟ್‌ ಕಾರ್ನ್- 2 ಬಟ್ಟಲು (ಬೇಯಿಸಿದ್ದು)
  • ಕ್ಯಾಪ್ಸಿಕಂ-1
  • ಈರುಳ್ಳಿ-2-3 (ಸಣ್ಣಗೆ ಕತ್ತರಿಸಿದ್ದು)ಕಡಲೆ ಹಿಟ್ಟು
  • ಕಡಲೆ ಹಿಟ್ಟು- 1 ಬಟ್ಟಲು
  • ಅಕ್ಕಿ ಹಿಟ್ಟು- ಅರ್ಧ ಬಟ್ಟಲು
  • ಗರಂಮಸಾಲೆ ಪುಡಿ- 1 ಚಮಚ
  • ಕಾಳುಮೆಣಿಸಿನ ಪುಡಿ- ಅರ್ಧ ಚಮಚ
  • ಪುದೀನಾ- ಸ್ವಲ್ಪ
  • ಹಸಿಮೆಣಸಿನ ಕಾಯಿ- 2-3
  • ಕೊತ್ತಂಬರಿ ಸೊಪ್ಪು-ಸ್ವಲ್ಪ
  • ಉಪ್ಪು-ರುಚಿಗೆ ತಕ್ಕಷ್ಟು
  • ಬ್ರೆಡ್ ಕ್ರಮ್ಸ್- ಅರ್ಧ ಬಟ್ಟಲು
  • ಎಣ್ಣೆ- ಕರಿಯಲು ಅಗತ್ಯವಿದ್ದಷ್ಟು

 

ಮಾಡುವ ವಿಧಾನ…

  • ಆಲೂಗಡ್ಡೆಯನ್ನು ಬೇಯಿಸಿ ಪುಡಿ ಮಾಡಿ. ಬೇಯಿಸಿದ ಸಿಹಿ ಜೋಳ ರುಬ್ಬಿ ಪಾತ್ರೆಗೆ ಹಾಕಿ. ನಂತರ ಬೇಯಿಸಿದ ಆಲೂಗಡ್ಡೆಯೊಂದಿಗೆ ಮಿಶ್ರಣ ಮಾಡಿ.
  • ಬಳಿಕ ಸಣ್ಣಗೆ ಹೆಚ್ಚಿದ ಕ್ಯಾಪ್ಸಿಕಂ, ಈರುಳ್ಳಿ ಹಾಕಿ. ನಂತರ ಅಕ್ಕಿ ಹಿಟ್ಟು, ಕಡಲೆ ಹಿಟ್ಟು, ಗರಂಮಸಾಲೆ, ಕಾಳು ಮೆಣಸಿನ ಪುಡಿ, ಪುದೀನಾ, ಹಸಿಮೆಣಸಿನ ಕಾಯಿ, ಉಪ್ಪು, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಕಲಸಿ. 10 ನಿಮಿಷ ಫ್ರಿಡ್ಜ್‌ನಲ್ಲಿಡಿ.
  • ಬಳಿಕ ಸಣ್ಣ ಉಂಡೆ ಮಾಡಿ. ಬ್ರೆಡ್ ಕ್ರಮ್ಸ್ ಅಲ್ಲಿ ಅದ್ದಿ ಕಾದ ಎಣ್ಣೆಗೆ ಹಾಕಿ. ಚಿನ್ನದ ಬಣ್ಣ ಬಂದ ಬಳಿಕ ಎಣ್ಣೆಯಿಂದ ತೆಗೆಯಿರಿ. ಇದೀಗ ಈ ಉಂಡೆಗಳಿಗೆ ಟೂತ್ ಪಿಕ್ ಗಳನ್ನು ಚುಚ್ಚಿ ಅಲಂಕರಿಸಿದರೆ ರುಚಿಕರವಾದ ಸ್ವೀಟ್‌ ಕಾರ್ನ್ ಲಾಲಿಪಾಪ್ ಸವಿಯಲುಸಿದ್ಧ.
Also Read  ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ಸುದರ್ಶನ ಹೋಮ

error: Content is protected !!
Scroll to Top