ಕಾಂಗ್ರೆಸ್ ಸರಕಾರದಿಂದ 40000 ಕುಟುಂಬಗಳ ಪಡಿತರ ಚೀಟಿ ರದ್ದತಿ ದುರದೃಷ್ಠಕರ – ಗುರ್ಮೆ ಸುರೇಶ್ ಶೆಟ್ಟಿ

(ನ್ಯೂಸ್ ಕಡಬ)newskadaba.com, ಉಡುಪಿ(ಅ.01): ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಪಂಚ ಗ್ಯಾರಂಟಿಗಳನ್ನು ನೀಡುವುದಾಗಿ ಜನರಿಗೆ ಭರವಸೆ ನೀಡಿ ಸರಕಾರ ರಚನೆಯಾದ ನಂತರ ಪ್ರಾರಂಭಿಕ ಹಂತದಲ್ಲಿ ಕಠಿಣ ಮಾರ್ಗಸೂಚಿಗಳೊಂದಿಗೆ ತುರಾತುರಿಯಲ್ಲಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಜನರ ಮುಂಗೈಗೆ ತುಪ್ಪ ಸವರುವ ಕೆಲಸ ಮಾಡಿದೆ.

ಕಾಂಗ್ರೇಸ್ ಸರಕಾರವು ಪಂಚ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮೂಲಭೂತ ಸೌಕರ್ಯಗಳಾದ ರಸ್ತೆ, ನೀರಾವರಿ ಸೌಲಭ್ಯ, ಆರೋಗ್ಯ, ಶಿಕ್ಷಣ ಕ್ಷೇತ್ರಗಳ ಅಭಿವೃದ್ಧಿ ಕಾರ್ಯಗಳನ್ನು ಕಡೆಗಣಿಸುತ್ತಿರುವುದು ಶೋಚನೀಯ. ಅಂಗನವಾಡಿ ಸಹಾಯಕಿ ಹಾಗೂ ಕಾರ್ಯಕರ್ತೆ ಇವರನ್ನು ಪಂಚ ಗ್ಯಾರಂಟಿಗಳ ಅನುಷ್ಠಾನದ ಸರ್ವೆ ಕಾರ್ಯಗಳಿಗೆ ಬಳಸಿಕೊಂಡು ಮೂರು ತಿಂಗಳ ವರೆಗೆ ವೇತನವನ್ನು ನೀಡದೇ ಇರುವುದು ಹಾಗೂ ಸರಕಾರಿ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಎಂ.ಆರ್.ಐ ಸ್ಕ್ಯಾನಿಂಗ್, ಡಯಾಲಿಸಿಸ್ ಮೆಶಿನ್ ಗಳನ್ನು ಸಮರ್ಪಕ ನಿರ್ವಹಣೆಗೆ ತಾಂತ್ರಿಕ ಸಿಬ್ಬಂದಿಗಳೊಂದಿಗೆ ನಿರ್ವಹಣಾ ಅನುದಾನವನ್ನು ನೀಡದೇ ಇರುವುದು, ಶಾಲಾ-ಕಾಲೇಜು ಸರಕಾರಿ ಕಟ್ಟಡಗಳಿಗೆ ತೆರಿಗೆ ವಸೂಲಾತಿಯ ನೆಪವೊಡ್ಡಿ ವಿದ್ಯುತ್ ಸಂಪರ್ಕ ಕಡಿತ ಮಾಡಿರುವುದು. ವಾಲ್ಮೀಕಿ ನಿಗಮದ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿರುವುದು ಸರಕಾರದ ಆರ್ಥಿಕ ದಿವಾಳಿಗೆ ಕಾರಣವಾಗಿದೆ.

error: Content is protected !!

Join WhatsApp Group

WhatsApp Share