ಸಿಡಿಲು ಬಡಿದು ಮನೆಗೆ ಅಪಾರ ಹಾನಿ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಅ. 01. ಮನೆಯೊಂದಕ್ಕೆ ಸಿಡಿಲು ಬಡಿದ ಪರಿಣಾಮ ಅಪಾರ ಹಾನಿಯುಂಟಾದ ಘಟನೆ ಬಂಟ್ವಾಳದ ಉರುವಾಲು ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ.

ತಾರಿದಡಿ ನಿವಾಸಿ ಸೇಸಪ್ಪ ಅವರ ಮನೆಗೆ ಸಿಡಿಲು ಬಡಿದಿದ್ದು, ಗೋಡೆ ಬಿರುಕು ಬಿಟ್ಟಿದೆ. ಇದರೊಂದಿಗೆ ವಿದ್ಯುತ್ ಉಪಕರಣಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಸಿಡಿಲು ಬಡಿದ ಸಂದರ್ಭ ಸೇಸಪ್ಪ ಗೌಡರು ಮಕ್ಕಳನ್ನು ಶಾಲೆಯಿಂದ ಕರೆದುಂಡು ಬರಲು ತೆರಳಿದ್ದರು. ಹೀಗಾಗಿ ಸಂಭವನೀಯ ಅಪಾಯ ತಪ್ಪಿದಂತಾಗಿದೆ ಎನ್ನಲಾಗಿದೆ.

Also Read  ಹತ್ರಾಸ್ ರೇಪ್ & ಮರ್ಡರ್ ಕೇಸ್ ಖಂಡಿಸಿ ಬಿ. ಸಿ ರೋಡ್ ನಲ್ಲಿ ಮೊಂಬತ್ತಿ ಜಾಥಾ

error: Content is protected !!
Scroll to Top