ಭಾರತ- ಬಾಂಗ್ಲಾದೇಶ 2ನೇ ದಿನದ ಟೆಸ್ಟ್ ಪಂದ್ಯಾಟ ಮಳೆಗೆ ಆಹುತಿ

(ನ್ಯೂಸ್ ಕಡಬ) newskadaba.com ಕಾನ್ಪುರ, ಸೆ. 28. ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೆ ಟೆಸ್ಟ್ ಪಂದ್ಯದ ಎರಡನೆ ದಿನದ ಪಂದ್ಯಾಟ ಮಳೆಗೆ ಆಹುತಿಯಾಗಿದೆ.

ಎರಡನೆ ದಿನದಾಟದ ಪಂದ್ಯದಲ್ಲಿ ಭಾರೀ ಮಳೆಯಾಗಿರುವುದರಿಂದ ಮೈದಾನದಲ್ಲಿ ಹೆಚ್ಚು ಮಳೆ ನೀರು ನಿಂತಿದೆ. ಈ ಹಿನ್ನೆಲೆಯಲ್ಲಿ ಮೂರನೆ ದಿನದ ಪಂದ್ಯಾಟ ನಡೆಯುವುದು ಅನುಮಾನದಿಂದ ಕೂಡಿದೆ. ಮಳೆ ನಿಲ್ಲದ ಕಾರಣ ಟೀಮ್ ಇಂಡಿಯಾ ವಾಪಸ್ ಹೋಟೇಲ್‌ಗೆ ಮರಳಿದೆ.

 

Scroll to Top