ಅಯ್ಯಪ್ಪ ಸ್ವಾಮಿಯ ಭಕ್ತಿಗೀತೆಯನ್ನು ರಾಜಕೀಯ ಪ್ರಚಾರಕ್ಕೆ ದುರ್ಬಳಕೆಯ ಆರೋಪ ► ಶಾಸಕ ಮೊಯ್ದೀನ್ ಬಾವಾ ವಿರುದ್ಧ ಪುತ್ತೂರು ಠಾಣೆಯಲ್ಲಿ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಪುತ್ತೂರು, ಮಾ.10. ಹಿಂದೂಗಳ ಧಾರ್ಮಿಕ ಶೃದ್ಧಾ ಕೇಂದ್ರವಾದ ಶಬರಿಮಲೆ ಅಯ್ಯಪ್ಪ ಸ್ವಾಮಿಯವರ ಭಕ್ತಿ ಗೀತೆಯನ್ನು ತನ್ನ ರಾಜಕೀಯ ಪ್ರಚಾರಕ್ಕಾಗಿ ದುರ್ಬಳಕೆ ಮಾಡಿರುವುದಾಗಿ ಆರೋಪಿಸಿ ಶಾಸಕ ಬಿ.ಎ.ಮೊಯ್ದಿನ್ ಬಾವ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಶಾಸಕ ಮೊಯ್ದಿನ್ ಶಬರಿಮಲೆ ಅಯ್ಯಪ್ಪನನ್ನು ಸ್ತುತಿಸುವ ಹಾಡಿನ ರಾಗವನ್ನು ಬಳಸಿ ತುಳುವಿನಲ್ಲಿ ಹಾಡು ರಚಿಸಿ ಹಿಂದೂಗಳಿಗೆ ಅಪಮಾನ ಮಾಡಿದ್ದು, ಚುನಾವಣೆಯ ಸಂದರ್ಭ ಈ ರೀತಿಯ ಕೋಮು ಸೌಹಾರ್ದತೆಯನ್ನು ಕೆಡಿಸುವಂತಹ ವಿಷಯಗಳನ್ನು ಪ್ರಚಾರಕ್ಕೆ ಬಳಸಿರುವ ಮೊಯ್ದಿನ್ ಬಾವ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಹಿಂದೂ ಸಂಘಟನಾ ಮುಖಂಡ ಅರುಣ್ ಪುತ್ತಿಲ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ GNL 71/2018 ರಂತೆ ಪ್ರಕರಣ ದಾಖಲಾಗಿದೆ.

Also Read  ಜ. 16 ರಿಂದ 20 ರವರೆಗೆ ಎಂಡೋಸಲ್ಫಾನ್ ಸಂತ್ರಸ್ತರಿಗೆ ವಿಶೇಷ ಆರೋಗ್ಯ ತಪಾಸಣಾ ಶಿಬಿರ

error: Content is protected !!
Scroll to Top