ಆಲಂಕಾರು: ವಿಷ ಸೇವಿಸಿ‌ ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ



(ನ್ಯೂಸ್ ಕಡಬ) newskadaba.com ಕಡಬ, ಮಾ.10. ಸಾಲಬಾಧೆಯಿಂದ ಬೇಸತ್ತು ವ್ಯಕ್ತಿಯೋರ್ವರು ವಿಷ ಸೇವಿಸಿ ಕುಮಾರಧಾರಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ರಾತ್ರಿ ಆಲಂಕಾರಿನಲ್ಲಿ ನಡೆದಿದೆ.







ಆತ್ಮಹತ್ಯೆ ಮಾಡಿಕೊಂಡವರನ್ನು ಆಲಂಕಾರು ಗ್ರಾಮದ ನಾಡ್ತಿಲ ನಿವಾಸಿ ಶಶಿಧರ್ ಗೌಡ(40) ಎಂದು ಗುರುತಿಸಲಾಗಿದೆ. ಸಾಲಭಾದೆಯಿಂದ ಬಳಲುತ್ತಿದ್ದ ಇವರು ವಿಪರೀತ ಮದ್ಯ ಸೇವನೆಯ ಚಟದಿಂದಾಗಿ ಬೇಸತ್ತು ವಿಷ ಪದಾರ್ಥ ಸೇವಿಸಿದ್ದಲ್ಲದೆ ಕುಮಾರಧಾರಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮೃತರ ಪತ್ನಿ ಕುಸುಮ ಎಂಬವರು ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






error: Content is protected !!
Scroll to Top