‘ಯುವದಸರಾ’ ವೀಕ್ಷಣೆಗೆ ಇಂದಿನಿಂದ (ಸೆ.27) ಆನ್‌ಲೈನ್ ನಲ್ಲಿ ಟಿಕೆಟ್ ಲಭ್ಯ

(ನ್ಯೂಸ್ ಕಡಬ) newskadaba.com ಸೆ. 26. ಇತಿಹಾಸ ಪ್ರಸಿದ್ದ ದಸರಾದಲ್ಲಿ ಈ ಬಾರಿ ಮೈಸೂರು ಹೊರವಲಯದ ಉತ್ತನಹಳ್ಳಿ ಸಮೀಪ ಆಯೋಜಿಸಿರುವ ‘ಯುವ ದಸರಾ’ ಕಾರ್ಯಕ್ರಮ ವೀಕ್ಷಣೆಗೆ ಇದೇ ಮೊದಲ ಬಾರಿಗೆ ಟಿಕೆಟ್‌ ಮಾರಾಟಕ್ಕೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.


ಎಂದಿನಂತೆ ಈ ವರ್ಷವೂ ಕೂಡಾ ನಾಡಹಬ್ಬ ಮೈಸೂರು ದಸರಾವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಅ.06ರಿಂದ ಅ.10ರ ವರೆಗೆ ನಿತ್ಯ ಸಂಜೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಯುವದಸರಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅ.06ರಂದು ಕನ್ನಡ ಚಲನಚಿತ್ರ ನಿರ್ಮಾಪಕಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಉದ್ಘಾಟಿಸಲಿದ್ದಾರೆ.

ಈ ಪ್ರಯುಕ್ತ ಟಿಕೆಟ್‌ಗಳನ್ನು ಸೆ.27ರಿಂದ ಆನ್‌ಲೈನ್‌ನಲ್ಲಿ ದಸರಾದ ಅಧಿಕೃತ ಜಾಲತಾಣವಾದ https://www.mysoredasara.gov.in/ ಹಾಗೂ Book My Show ಮೂಲಕ ಖರೀದಿಸಬಹುದು. ವೀಕ್ಷಕರ ಗ್ಯಾಲರಿ–1 (ವೇದಿಕೆ ಸಮೀಪ) ಟಿಕೆಟ್‌ ಮುಖಬೆಲೆ ₹8 ಸಾವಿರ ಹಾಗೂ ವೀಕ್ಷಕರ ಗ್ಯಾಲರಿ–2ರ ಟಿಕೆಟ್‌ಗಳ ಮುಖಬೆಲೆ ₹5 ಸಾವಿರ ನಿಗದಿಪಡಿಸಲಾಗಿದೆ. ಒಂದು ಟಿಕೆಟ್‌ನಲ್ಲಿ ಒಬ್ಬರಿಗೆ ಒಂದು ಕಾರ್ಯಕ್ರಮಕ್ಕೆ ಮಾತ್ರ ಪ್ರವೇಶ (ನಿಗದಿತ ಗ್ಯಾಲರಿಯಲ್ಲಿ) ಅವಕಾಶವಿರುತ್ತದೆ’ ಎಂದು ದಸರಾ ವಿಶೇಷಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದ್ದಾರೆ.

error: Content is protected !!

Join WhatsApp Group

WhatsApp Share