(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 26. ಅಡಿಕೆ ಆಮದು ನೀತಿಗೆ ಕೇಂದ್ರ ಸರಕಾರದಿಂದ ಗ್ರೀನ್ ಸಿಗ್ನಲ್ ನೀಡಿರುವುದನ್ನು ಪುತ್ತೂರು ಶಾಸಕ ಅಶೋಕ್ ರೈ ಖಂಡನೆ ಮಾಡಿದ್ದಾರೆ.
ಅಡಿಕೆ ದರ ಇಳಿಕೆಯಾಗಿ ಎರಡೂ ಜಿಲ್ಲೆಗಳ ಆರ್ಥಿಕ ಪರಿಸ್ಥಿತಿ ನೆಲಕ್ಕೆ ಬೀಳಲಿದ್ದು, ಭೂತಾನ್ನಿಂದ ಅಡಿಕೆ ಆಮದು ಮಾಡುವ ನೀತಿ ಅತ್ಯಂತ ಆತಂಕಕಾರಿ ವಿಚಾರವಾಗಿದೆ. ಭೂತಾನ್ ನಿಂದ ನಿರಂತರವಾಗಿ ಅಡಿಕೆ ಆಮದುಗೊಂಡರೆ ಇಲ್ಲಿ ಅಡಿಕೆ ದರ ಕೇವಲ ರೂ.120 ಕ್ಕೆ ತಲುಪುವ ಅಪಾಯವಿದೆ ಇದರಿಂದ ಜಿಲ್ಲೆಯ ಜನತೆಯ ಬದುಕು ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಲಿದೆ. ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಸ್ಪಷ್ಟವಾದ ಮಾಹಿತಿ ಇರಲಿಲ್ಲ. ಜನಪ್ರತಿನಿಧಿಗಳು ಈ ಬಗ್ಗೆ ಸರಿಯಾದ ಮಾಹಿತಿಯನ್ನು ಕೇಂದ್ರದ ಸಚಿವರಿಗೆ ತಿಳಿಸುವ ಕೆಲಸಕ್ಕೆ ಮುಂದಾಗಬೇಕು.