ಕಮಲಾ ಹ್ಯಾರಿಸ್ ಕಚೇರಿ ಮೇಲೆ ಗುಂಡಿನ ದಾಳಿ

(ನ್ಯೂಸ್ ಕಡಬ) newskadaba.com ಸೆ. 25. ಕಮಲಾ ಹ್ಯಾರಿಸ್ ಕಚೇರಿ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿರುವ ಕುರಿತು ಪೊಲೀಸ್ ಮೂಲಗಳು ಮಾಹಿತಿ ನೀಡಿದೆ.

ಅರಿಝೋನಾದಲ್ಲಿರುವ ಕಮಲಾ ಹ್ಯಾರಿಸ್ ಅವರ ಪ್ರಚಾರ ಕಚೇರಿಗೆ ಗುಂಡು ಹಾರಿಸಲಾಗಿದೆ. ಮಧ್ಯರಾತ್ರಿಯ ನಂತರ ಯಾರೋ ಗುಂಡುಗಳನ್ನು ಹಾರಿಸಿದ್ದಾರೆ. ಟೆಂಪೆಯಲ್ಲಿನ ಸದರ್ನ್ ಅವೆನ್ಯೂ ಮತ್ತು ಪ್ರೀಸ್ಟ್ ಡ್ರೈವ್ ಬಳಿಯ ಡೆಮಾಕ್ರಟಿಕ್ ನ್ಯಾಷನಲ್ ಕಮಿಟಿ ಪ್ರಚಾರ ಕಚೇರಿಯಲ್ಲಿ ಗುಂಡುಗಳಿಂದ ಹಾನಿ ಕಂಡುಬಂದಿದೆ ಎಂದು ಟೆಂಪೆ ಪೊಲೀಸ್ ಇಲಾಖೆ ನ್ಯೂಯಾರ್ಕ್ ಪೋಸ್ಟ್‌ಗೆ ತಿಳಿಸಿದೆ.

Scroll to Top