ಲಡ್ಡು ಪ್ರಸಾದದಲ್ಲಿ ಗುಟ್ಕಾ ಪತ್ತೆ..!

(ನ್ಯೂಸ್ ಕಡಬ) newskadaba.com ಸೆ. 24. ತಮ್ಮ ಮನೆಗೆ ತಂದ ಪ್ರಸಾದದಲ್ಲಿ, ಕಾಗದದಲ್ಲಿ ಸುತ್ತಿಟ್ಟ ತಂಬಾಕು ತುಂಡುಗಳು ಪತ್ತೆಯಾಗಿವೆ ಎಂದು ತೆಲಂಗಾಣದ ಖಮ್ಮಂ ಜಿಲ್ಲೆಯ ಭಕ್ತೆಯೊಬ್ಬರು ತಿರುಪತಿ ಲಡ್ಡು ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಕುರಿತು ವರದಿಯಾಗಿದೆ.

ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸುತ್ತಿರುವ ವಿವಾದದ ನಡುವೆಯೇ ಈ ಘಟನೆ ನಡೆದಿದ್ದು, ಗೊಲ್ಲಗುಡೆಂ ಪಂಚಾಯತ್‌ ವ್ಯಾಪ್ತಿಯ ಭಕ್ತೆಯೊಬ್ಬರು ಅವರು ಸೆಪ್ಟೆಂಬರ್ 19ರಂದು ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿ ಬಳಿಕ ನೆರೆಮನೆಯವರಿಗೆ ಹಂಚಲೆಂದು ಲಡ್ಡು ತೆಗೆದುಕೊಂಡು ಮನೆಗೆ ತೆರಳಿದ್ದರು. ಪ್ರಸಾದ ರೂಪದಲ್ಲಿ ತಂದಿದ್ದ ಲಡ್ಡುವಿನಲ್ಲಿ ಸಣ್ಣ ಪೇಪರ್‌ನಲ್ಲಿ ಕಟ್ಟಿದ್ದ ಗುಟ್ಕಾ ಪತ್ತೆಯಾಗಿದೆ ಎಂದು ಮಹಿಳೆ ಆರೋಪಿಸಿದ್ದಾರೆ.

Also Read  ಪಟಾಕಿ ತರಲೆಂದು ತೆರಳಿದ್ದ ಬಾಲಕನ ಹತ್ಯೆಗೈದ ದುಷ್ಕರ್ಮಿಗಳು..! ➤ ಓರ್ವನ ಬಂಧನ

 

 

 

error: Content is protected !!
Scroll to Top