ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
BMTCಯಿಂದ ವಾಹನ ಚಾಲನಾ ತರಬೇತಿ- ಅರ್ಜಿ ಆಹ್ವಾನ – News Kadaba

BMTCಯಿಂದ ವಾಹನ ಚಾಲನಾ ತರಬೇತಿ- ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 21. ಬಿಎಂಟಿಸಿ ತರಬೇತಿ ಕೇಂದ್ರದಿಂದ ಸಾರ್ವಜನಿಕರಿಗೆ ಲಘು ಮತ್ತು ಘನ ವಾಹನ ಚಾಲನಾ ತರಬೇತಿ ನೀಡಲಾಗುತ್ತಿದ್ದು, ಆಸಕ್ತರು ಅರ್ಜಿ ಸಲ್ಲಿಸಲು ಕೋರಲಾಗಿದೆ. ಇದರಲ್ಲಿ 18 ವರ್ಷ ತುಂಬಿದವರಿಗೆ ಲಘು ವಾಹನ ಮತ್ತು 20 ವರ್ಷ ತುಂಬಿರುವವರಿಗೆ ಭಾರಿ ವಾಹನ ಚಾಲನಾ ತರಬೇತಿ ನೀಡಲಾಗುತ್ತದೆ.

ಆಸಕ್ತರು ಜನನ ಪ್ರಮಾಣ ಪತ್ರ ಅಥವಾ SSLC ಅಂಕಪಟ್ಟಿ, ಆಧಾರ್ ಕಾರ್ಡ್, ಪಾಸ್ಪೋರ್ಟ್ ಅಳತೆಯ ಐದು ಭಾವಚಿತ್ರದೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. 26 ದಿನಗಳ ಕಾಲ ಚಾಲನಾ ತರಬೇತಿ ನೀಡುವ ಜೊತೆಗೆ ವಾಹನ ಚಾಲನಾ ಪರವಾನಿಗೆಯನ್ನು ಬಿಎಂಟಿಸಿ ಮಾಡಿಸಿಕೊಡಲಿದೆ. ಲಘು ವಾಹನ ಚಾಲನಾ ತರಬೇತಿಗೆ 7 ಸಾವಿರ ರೂಪಾಯಿ(ವಸತಿ ರಹಿತ), ವಸತಿ ಸಹಿತ 13,000 ರೂ. ಶುಲ್ಕ ನಿಗದಿಪಡಿಸಲಾಗಿದೆ. ಭಾರಿ ವಾಹನ ಚಾಲನಾ ತರಬೇತಿಗೆ ವಸತಿ ರಹಿತ 11,000 ರೂ. ಹಾಗೂ ವಸತಿ ಸಹಿತ 16,700 ರೂ. ಶುಲ್ಕ ನಿಗದಿಪಡಿಸಲಾಗಿದೆ. ಮಾಹಿತಿ ಮತ್ತು ನೋಂದಣಿಗಾಗಿ 77609 91085, 63648 58520 ಗೆ ಕರೆ ಮಾಡಬಹುದು. ಅಥವಾ ಮಾಗಡಿ ಮುಖ್ಯ ರಸ್ತೆಯ ವಡ್ಡರಹಳ್ಳಿಯಲ್ಲಿರುವ ಬಿಎಂಟಿಸಿ ಚಾಲಕರ ತರಬೇತಿ ಕೇಂದ್ರಕ್ಕೆ ಭೇಟಿ ನೀಡಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Scroll to Top