ಬಹುತೇಕ ಎಟಿಎಂ ಗಳಲ್ಲಿ ಕಂಡುಬರುತ್ತಿದೆ ನೋ ಕ್ಯಾಶ್ ಬೋರ್ಡ್ ► ಚುನಾವಣೆ ಸಮೀಪಿಸುತ್ತಿದ್ದಂತೆ ಶುರುವಾಯಿತು ನೋಟುಗಳ ಕೊರತೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ.07. ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ನಗದು ಹಣ ಸಂಗ್ರಹ ಜೋರಾಗಿದ್ದು, ಬಹುತೇಕ ಎಟಿಎಂಗಳಲ್ಲಿ ನೋಕ್ಯಾಶ್ ಬೋರ್ಡ್ ಕಾಣಿಸುತ್ತಿವೆ.

ಇದರ ಪರಿಣಾಮವಾಗಿ ಖಾಸಗಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಗಳ ಎಟಿಎಂ ಗಳಲ್ಲಿ ನೋಟುಗಳ ಕೊರತೆ ಸೃಷ್ಟಿಯಾಗಿದ್ದು, ಒಂದು ವಾರದಿಂದ ಬ್ಯಾಂಕ್ ಗಳ ನಗದು ವಿಭಾಗದಲ್ಲಿ ಹಣ ವಿತ್ ಡ್ರಾ ಪ್ರಮಾಣ ಏರಿದೆ. ಹಾಗಾಗಿ ರಾಜ್ಯದ ಹಲವು ಭಾಗಗಳಲ್ಲಿ ಜನ ನಗದು ಹಣಕ್ಕಾಗಿ ಪರದಾಡುತ್ತಿದ್ದಾರೆ. ನಾನಾ ರಾಜಕೀಯ ಪಕ್ಷಗಳ ಸಭೆ, ಸಮಾರಂಭಗಳಿಗೆ ಹಣ ಹಂಚುವ ಉದ್ದೇಶದಿಂದ ಭಾರೀ ಪ್ರಮಾಣದಲ್ಲಿ ನಗದು ಸಂಗ್ರಹ ನಡೆಯುತ್ತಿದೆ ಎನ್ನಲಾಗಿದೆ.

Also Read  ಕಡಬ ತಾಲೂಕು ಕಛೇರಿಗೆ ಜಿಲ್ಲಾಧಿಕಾರಿ ಭೇಟಿ

error: Content is protected !!
Scroll to Top