ಕೊಲೆ ಪ್ರಕರಣ: ಆರೋಪಿಯನ್ನು ಗುಂಡಿಕ್ಕಿ ಬಂಧನ..!

(ನ್ಯೂಸ್ ಕಡಬ) newskadaba.com ಕಲಬುರಗಿ, ಸೆ.21. ಗ್ರಾಮ ಪಂಚಾಯತ್ ಮಾಜಿ ಸದಸ್ಯ ವಿಶ್ವನಾಥ ಜಮಾದಾರ್ ಕೊಲೆ ಪ್ರಕರಣದ ಆರೋಪಿಯನ್ನು ಇಂದು ಮುಂಜಾನೆ ಕಾಲಿಗೆ ಗುಂಡಿಕ್ಕಿ ಬಂಧಿಸಿರುವ ಘಟನೆ ಆಳಂದ ತಾಲೂಕಿನ ಮಾಡಿಯಾಳ ಗ್ರಾಮದಲ್ಲಿ ನಡೆದಿದೆ. ಬಂಧಿತ ಆರೋಪಿಯನ್ನು ಲಕ್ಷ್ಮಣ ಪೂಜಾರಿ ಹಿತ್ತಲಸೀರೂರು (45) ಎಂದು ಗುರುತಿಸಲಾಗಿದೆ.

ವಿಶ್ವನಾಥ ಜಮಾದಾರ್ ಅವರನ್ನು ಕಳೆದ ಶುಕ್ರವಾರ ಆಳಂದ ತಾಲೂಕಿನ ಜಿಡಗಾ ಕ್ರಾಸ್ ಬಳಿ ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. ಈ ಹತ್ಯೆ ಪ್ರಕರಣದ ಆರೋಪಿ ಲಕ್ಷ್ಮಣ ಪೂಜಾರಿ ಹಿತ್ತಲಸೀರೂರು ಎಂಬಾತ ಆಳಂದ ತಾಲೂಕಿನ ಮಾಡ್ಯಾಳ ಗ್ರಾಮದಲ್ಲಿದ್ದರುವ ಬಗ್ಗೆ ಮಾಹಿತಿ ಪಡೆದ ಅಫ್ಝಲ್ ಪುರ ಠಾಣೆಯ ಪೊಲೀಸರು ಇಂದು ಮುಂಜಾನೆ ಅಲ್ಲಿಗೆ ತೆರಳಿದ್ದಾರೆ. ಬಂಧಿಸಲು ಮುಂದಾದಾಗ ಲಕ್ಷ್ಮಣ ಪೂಜಾರಿ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಪಿಎಸ್ಸೈ ಇಂದುಮತಿ ಆರೋಪಿಯ ಬಲಗಾಲಿಗೆ ಶೂಟೌಟ್ ಮಾಡಿದ್ದಾರೆ ಎಂದು ವರದಿ ತಿಳಿಸಿದೆ.

Also Read  ಜಮ್ಮು ಕಾಶ್ಮೀರದಲ್ಲಿ ಗುಂಡಿನ ಚಕಮಕಿ ➤ 24 ಗಂಟೆಗಳಲ್ಲಿ ಒಂಭತ್ತು ಮಂದಿ ಉಗ್ರರ ಹತ್ಯೆ

 

error: Content is protected !!
Scroll to Top