ತಾನೇ ಸಾಕಿದಾ ಗಿಣಿ, ಹದ್ದಾಗಿ ಚುಚ್ಚಿತಲ್ಲೋ…! ► ತಾನೇ ಕಟ್ಟಿ ಬೆಳೆಸಿದ ಪಕ್ಷದಿಂದ ಉಪೇಂದ್ರ ಉಚ್ಚಾಟನೆ…?

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ.07. ಕೆಲವೇ ತಿಂಗಳುಗಳ ಹಿಂದೆ ತಾನೇ ಕಟ್ಟಿ ಬೆಳೆಸಿ ಅಸ್ತಿತ್ವಕ್ಕೆ ತಂದ ಚಿತ್ರನಟ ಉಪೇಂದ್ರ ನೇತೃತ್ವದ ಕರ್ನಾಟಕ ಪ್ರಜ್ಞಾವಂತರ ಜನತಾ ಪಾರ್ಟಿ (ಕೆ.ಪಿ.ಜೆ.ಪಿ) ಪಕ್ಷದಿಂದ ಇದೀಗ ಸಂಸ್ಥಾಪಕ ಉಪೇಂದ್ರ ಅವರನ್ನೇ ಉಚ್ಚಾಟಿಸುವ ಪ್ರಯತ್ನಗಳು ತೆರೆಮರೆಯಲ್ಲಿ ನಡೆಯುತ್ತಿವೆ ಎನ್ನಲಾಗಿದ್ದು, ಇದೀಗ ಉಪೇಂದ್ರ ರವರೇ ಪಕ್ಷದಿಂದ ಹೊರಬರುವ ಆಲೋಚನೆ ಮಾಡಿದ್ದಾರೆ.

ಕೆಪಿಜೆಪಿ ಪಕ್ಷವು ಸಹ ಸಂಸ್ಥಾಪಕ ಮಹೇಶ್ ಗೌಡ ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿದ್ದು, ಮಹೇಶ್ ಗೌಡ ಜತೆಗೆ ಮುಂಬರುವ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ವಿಷಯದಲ್ಲಿ ನನ್ನ ಬೇಡಿಕೆಗಳಿಗೆ ಸಮ್ಮತಿಸದಿದ್ದರೆ ಪಕ್ಷದಿಂದಲೇ ಉಚ್ಚಾಟಿಸುವುದಾಗಿ ಉಪೇಂದ್ರರವರಿಗೆ ಎಚ್ಚರಿಕೆ ನೀಡಿದ್ದಾರೆ‌ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಮಂಗಳವಾರದಂದು ಉಪೇಂದ್ರ ತನ್ನ ನೇತೃತ್ವದಲ್ಲಿ ಪಕ್ಷದ ಪದಾಧಿಕಾರಿಗಳ ಸಭೆಯನ್ನು ಕರೆದಿದ್ದು ನೂತನ ಪಕ್ಷ ಕಟ್ಟುವ ಬಗ್ಗೆ ಯೋಜನೆ ಹಾಕಿದ್ದಾರೆ ಎನ್ನಲಾಗಿದೆ.

Also Read  ಮಹಿಳೆಯ ಖಾಸಗಿ ಫೋಟೊ ತೆಗೆದ ಪ್ರಕರಣ ➤ ಆರೋಪಿಯ ವಿರುದ್ಧ ಎಫ್‌ಐಆರ್‌ ದಾಖಲು

error: Content is protected !!
Scroll to Top