ಸೆ.17 ರವರೆಗೆ ದರ್ಶನ್‌ ಮತ್ತು ಗ್ಯಾಂಗ್‌ ಗೆ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 13.  ದರ್ಶನ್‌ ಮತ್ತು ಗ್ಯಾಂಗ್‌ ನ ನ್ಯಾಯಾಂಗ ಬಂಧನ ಅವಧಿ ಸೆ.17ವರೆಗೆ ವಿಸ್ತರಣೆ ಮಾಡಿದೆ. ಇಂದು ನ್ಯಾಯಾಂಗ ಬಂಧನದ ಅವಧಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಎಲ್ಲಾ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ 24 ನೇ ಎಸಿಎಂಎಂ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದರು.

ಪವಿತ್ರಾ ಗೌಡ, ದರ್ಶನ್‌  ಸೇರಿದಂತೆ ಎಲ್ಲಾ ಆರೋಪಿಗಳ ಹೆಸರನ್ನು ಕರೆದಾಗ ಆರೋಪಿಗಳು ಎಸ್‌ ಸರ್‌ ಎಂದು ಹೇಳಿ ವಿಚಾರಣೆಗೆ ಹಾಜರಾಗಿರುವುದನ್ನು ದೃಢೀಕರಿಸಿದರು. ಈ ವೇಳೆ ಸಂಪೂರ್ಣ ಚಾರ್ಜ್‌ಶೀಟ್‌ ನೀಡಬೇಕು. ಎಲೆಕ್ಟ್ರಾನಿಕ್ಸ್‌ ಸಾಕ್ಷ್ಯಗಳನ್ನು ಒಂದು ವಾರದಲ್ಲಿ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದರು. ಆದರೆ ಇನ್ನೂ ನೀಡಿಲ್ಲ ಎಂದು ಆರೋಪಿಗಳ ಪರ ವಕೀಲರು ವಾದಿಸಿದರು.

Also Read  ಉಳ್ಳಾಲ: ಯುವತಿಯ ಮಾನಭಂಗಕ್ಕೆ ಯತ್ನ ➤ ಉ.ಪ್ರದೇಶದ ಕಾರ್ಮಿಕನ ಬಂಧನ

error: Content is protected !!
Scroll to Top