ದಾರಿಯಲ್ಲಿ ಸಿಕ್ಕ ಯುವಕನ ವಶಕ್ಕೆ ಪಡೆದ ಪೊಲೀಸರು – ತನಿಖೆಯ ವೇಳೆ ಬಯಲಾಯಿತು ಆತನ ಕರಾಮತ್ತು

crime, arrest, suspected

(ನ್ಯೂಸ್ ಕಡಬ) newskadaba.com ಕಾಸರಗೋಡು, ಸೆ. 13. ಅನುಮಾನಾಸ್ಪದ ರೀತಿಯಲ್ಲಿ ಓಡಾಡುತ್ತಿದ್ದ ಯುವಕನನ್ನು, ಸಂಶಯದ ಮೇರೆಗೆ ಪೊಲೀಸರು ವಿಚಾರಿಸಿದಾಗ ಆತ ದರೋಡೆಕೋರ ಎನ್ನುವುದು ಹೊರ ಬಿದ್ದಿದೆ.

ಮಂಜೇಶ್ವರ ಪೊಲೀಸರು ರಾತ್ರಿ ವೇಳೆ ಗಸ್ತು ನಿರತರಾಗಿದ್ದ ವೇಳೆ ಅನುಮಾನಾಸ್ಪದವಾಗಿ ನಡೆದಾಡುತ್ತಿದ್ದ ಯುವಕನನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಿ ಠಾಣೆಗೆ ಕರೆತಂದಿದ್ದು, ಬಳಿಕ ತನಿಖೆ ನಡೆಸಿದಾಗ ಒರ್ವ ದರೋಡೆಕೋರನೆಂದು ತಿಳಿದು ಬಂದಿದೆ. ಈತನನ್ನು ಕರ್ನಾಟಕದ ಉಪ್ಪಿನಂಗಡಿ ನಿವಾಸಿ ಗೋಲಿ ಹನೀಫ (34) ಯಾನೆ ಮೊಹಮ್ಮದ್ ಹನೀಫ ಎಂದು ಗುರುತಿಸಲಾಗಿದೆ. ವಿಚಾರಣೆ ನಡೆಸಿದಾಗ ತಿಂಗಳ ಹಿಂದೆ ನಾಚಿಲಪದವು ಸುಂಕದಕಟ್ಟಾ ಎಂಬಲ್ಲಿ ಬೀಗ ಹಾಕಿದ ಮನೆಯಲ್ಲಿ ದರೋಡೆ ಮಾಡಿರುವುದಾಗಿ ಆತ ಒಪ್ಪಿಕೊಂಡಿರುವುದಾಗಿ ತಿಳಿದುಬಂದಿದೆ. ಆರೋಪಿ ವಿರುದ್ಧ ಕೇರಳ ಹಾಗೂ ಕರ್ನಾಟಕದಲ್ಲೂ ಹಲವು ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Scroll to Top