ಮಾದಕ ವಸ್ತು ಸಹಿತ ಆರೋಪಿ ಅರೆಸ್ಟ್..!

crime, arrest, suspected

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 07. ನಿಷೇಧಿತ ಮಾದಕ ವಸ್ತು ಸೇವನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಡ್ರಗ್ಸ್ ಸಹಿತ ಯುವಕನೋರ್ವನನ್ನು ಕಂಕನಾಡಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತನ್ನು ಅಶೋಕ ನಗರದ ಹಿಮಾನಿಷ್ (27) ಎಂದು ಗುರುತಿಸಲಾಗಿದೆ.  ಪೊಲೀಸರು ಸೆ. 03ರಂದು ಪಡೀಲ್ ಜಂಕ್ಷನ್ ಬಳಿ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದ ಸಂದರ್ಭ ಅನುಮಾನಗೊಂಡ ಕಾರನ್ನು ನಿಲ್ಲಿಸಿ ಅದರ ಚಾಲಕನನ್ನು ವಿಚಾರಿಸಿದಾಗ ಆತ ಕೇರಳ ಕಡೆಯಿಂದ ಬಂದಿದ್ದು ಡ್ರಗ್ಸ್ ಸೇವಿಸಿರುವುದಾಗಿ ತಿಳಿಸಿದ್ದಾನೆ. ಅದರಂತೆ ಕಾರನ್ನು ತಪಾಸಣೆ ನಡೆಸಿದ ಪೊಲೀಸರಿಗೆ ಕಾರಿನಲ್ಲಿ 2.60 ಗ್ರಾಂ ತೂಕದ ಮಾದಕ ವಸ್ತುಗಳನ್ನೊಳಗೊಂಡ ಪ್ಲಾಸ್ಟಿಕ್ ಕವರ್‌ಗಳು ಪತ್ತೆಯಾಗಿದೆ. ಕಾರು ಹಾಗೂ ಡ್ರಗ್ಸ್ 7.13 ಲ.ರೂ.
ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

Scroll to Top