ವಾಹನ ಅಪಘಾತ- 4 ಭಾರತೀಯರು ಮೃತ್ಯು..!

(ನ್ಯೂಸ್ ಕಡಬ) newskadaba.com  ನವದೆಹಲಿ, ಸೆ. 04.  ಟೆಕ್ಸಾಸ್‌ ನಲ್ಲಿ ಐದು ವಾಹನಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ಮಹಿಳೆ ಸೇರಿದಂತೆ ನಾಲ್ವರು ಭಾರತೀಯರು ಸಾವನ್ನಪ್ಪಿದ್ದಾರೆ. ಅರ್ಕಾನ್ಸಾಸ್ ನ ಬೆಂಟೊನ್‌ ವಿಲ್ಲೆಗೆ ತೆರಳುತ್ತಿದ್ದಾಗ ದುರಂತ ಸಂಭವಿಸಿದೆ.

ಮೃತಪಟ್ಟವರನ್ನು ಆರ್ಯನ್ ರಘುನಾಥ್ ಓರಂಪಾಟಿ, ಫಾರೂಕ್ ಶೇಕ್, ಲೋಕೇಶ್ ಪಾಲಾಚಾರ್ಲ ಮತ್ತು ದರ್ಶಿನಿ ವಾಸುದೇವನ್ ಎಂದು ಗುರುತಿಸಲಾಗಿದೆ. ವೇಗವಾಗಿ ಬಂದ ಟ್ರಕ್ ಹಿಂಬದಿಯಿಂದ ಭಾರತೀಯರಿದ್ದ ಎಸ್‌ ಯುವಿ ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಇದರಿಂದ ದೇಹಗಳು ಸುಟ್ಟುಹೋಗಿವೆ. ಅವರ ಗುರುತನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ಡಿಎನ್ಎ ಪರೀಕ್ಷೆ ಮಾಡಿದ್ದಾರೆ ಎಂದು ವರದಿ ತಿಳಿಸಿದೆ.

Also Read  `IRCTC' ವೆಬ್ ಸೈಟ್ ಸರ್ವರ್ ಡೌನ್ ➤  ರೈಲು ಟಿಕೆಟ್ ಬುಕ್ ಮಾಡಲು ಪ್ರಯಾಣಿಕರ ಪರದಾಟ

 

 

error: Content is protected !!
Scroll to Top