ನೇತ್ರಾವತಿ ನದಿಯಲ್ಲಿ ಮೊಸಳೆ ಪತ್ತೆ..!

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಸೆ. 04. ನೇತ್ರಾವತಿ ನದಿ ಸೇತುವೆಯ ಬದಿಯಲ್ಲಿ ಮಂಗಳವಾರದಂದು ಸಂಜೆ ಮೊಸಳೆಯೊಂದು ಪ್ರತ್ಯಕ್ಷವಾಗಿದೆ. ಇದರಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ.

ಇಳಂತಿಲ ಗ್ರಾ.ಪಂ. ವ್ಯಾಪ್ತಿಯ ನದಿಯ ಮತ್ತೊಂದು ಬದಿಯಲ್ಲಿ ಮೊಸಳೆಯೊಂದು ಮರಳ ದಿಬ್ಬದಲ್ಲಿ ವಿರಮಿಸುತ್ತಿರುವುದನ್ನು ಇಳಂತಿಲ ಗ್ರಾ.ಪಂ. ಮಾಜಿ ಸದಸ್ಯ, ಸಾಮಾಜಿಕ ಕಾರ್ಯಕರ್ತ ಫಯಾಜ್ ಯು.ಟಿ. ಅವರು ಗಮನಿಸಿದ್ದು, ಇದರ ಪೋಟೋವನ್ನು ಕ್ಲಿಕ್ಕಿಸಿದ್ದಾರೆ. ಇದು ದೊಡ್ಡ ಗಾತ್ರದ ಮೊಸಳೆಯಾಗಿದ್ದು, ಕಳೆದ 2022ರ ಸೆಪ್ಟೆಂಬರ್ ತಿಂಗಳಲ್ಲಿ ಪಂಜಳದ ಪೆಟ್ರೋಲ್ ಪಂಪ್ ಸಮೀಪ ನೇತ್ರಾವತಿ ನದಿಯಲ್ಲಿ ಮೂರು ಮೊಸಳೆಗಳು ಕಂಡು ಬಂದಿದ್ದವು. ಮಧ್ಯಾಹ್ನ ಹೊತ್ತಿನಲ್ಲಿ ನದಿ ಮಧ್ಯದಲ್ಲಿ ಇರುವ ಕುರುಚಲು ಹುಲ್ಲನ್ನು ಹೊಂದಿರುವ ಮರಳ ದಿಬ್ಬದ ಮೇಲೆ ಈ ಮೊಸಳೆಗಳು ವಿಶ್ರಾಂತಿ ಪಡೆಯುವುದು ಕಂಡು ಬಂದಿತ್ತು. ಇದರಲ್ಲಿ ಒಂದು ಮೊಸಳೆ ದೊಡ್ಡ ಗಾತ್ರದಾದರೆ, ಇನ್ನೆರಡು ಮೊಸಳೆಗಳು ಅದಕ್ಕಿಂತ ಸ್ವಲ್ಪ ಸಣ್ಣ ಗಾತ್ರದವಾಗಿದ್ದವು.

Also Read  ಕಡಬ: ಬೈಕ್ ಹಾಗೂ ಬಸ್ ನಡುವೆ ಅಪಘಾತ- ಸವಾರ ಮೃತ್ಯು..!

error: Content is protected !!
Scroll to Top