ಕೆಪಿಟಿಯಲ್ಲಿ ತಾಂತ್ರಿಕ ತರಬೇತಿ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 03. ಮಂಗಳೂರಿನ ಕರ್ನಾಟಕ (ಸರ್ಕಾರಿ) ಪಾಲಿಟೆಕ್ನಿಕ್, ಸಂಸ್ಥೆಯಲ್ಲಿ ಬ್ಯೂರೋ ಓಫ್ ಎನರ್ಜಿ ಎಫಿಷಿಯೆನ್ಸಿ ಮತ್ತು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಇವರ ಸಹಯೋಗದೊಂದಿಗೆ ಆಗಸ್ಟ್ 30ರಂದು “ಇಂಧನ ದಕ್ಷತಾ ಕ್ರಮಗಳು” ಎಂಬ ವಿಷಯದ ಬಗ್ಗೆ ವಿದ್ಯಾರ್ಥಿಗಳಿಗೆ ಹಾಗೂ ಪಂಪ್/ಉಪಕರಣ ತಂತ್ರಜ್ಞರಿಗೆ ಒಂದು ದಿನದ ತಾಂತ್ರಿಕ ತರಬೇತಿ ಕಾರ್ಯಕ್ರಮ ನಡೆಯಿತು.

ಮಂಗಳೂರಿನ ಕೆಜಿಟಿಟಿಐ, ಸಂಸ್ಥೆಯ ನಿರ್ದೇಶಕರಾದ ಗಿರಿಧರ ಸಾಲ್ಯಾನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಜಾಗತಿಕ ತಾಪಮಾನ ಏರಿಕೆ ಮತ್ತು ಅದನ್ನು ತಡೆಗಟ್ಟಬಹುದಾದ ನಿಟ್ಟಿನಲ್ಲಿ ಆದ ಮಾಂಟ್ರಿಯಲ್ ಒಪ್ಪಂದ 1987ರ ಮೇಲೆ ಬೆಳಕು ಚೆಲ್ಲಿದರು. ಮುಂದುವರಿದು ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಶಕ್ತಿಯ ಮೂಲಗಳು ಮತ್ತು ನವೀಕರಿಸಬಹುದಾದ ಇಂಧನ ಮೂಲಗಳ ಬಗೆಗೆ ಯುವ ಸಮೂಹದ ಪಾಲ್ಗೊಳ್ಳುವಿಕೆ  ಮತ್ತು ಅದರ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಂಶುಪಾಲ ಹರೀಶ ಶೆಟ್ಟಿ ಮಾತನಾಡಿ, ಪ್ರತಿ ದೇಶವು ಶಕ್ತಿಯ ನೂತನ ಮೂಲಗಳನ್ನು ಸಂಶೋಧಿಸುವ ಸಾಧ್ಯತೆಗಳ ಬಗ್ಗೆ ಹಾಗೂ ಆ ಮೂಲಕ ದೇಶವನ್ನು ಬಲಿಷ್ಠಗೊಳಿಸುವ ಮಹತ್ವದ ಬಗ್ಗೆ ವಿಚಾರವನ್ನು ಪ್ರಸ್ತುತಪಡಿಸಿದರು. ಅಲ್ಲದೇ ಅಪಾರ ಪ್ರಮಾಣದಲ್ಲಿ ಲಭ್ಯವಿರುವ ಹೈಡ್ರೋಜನ್ ಎನೆರ್ಜಿಯ ಬಗ್ಗೆ ವಿವರಿಸಿ ಈ ದಿಶೆಯಲ್ಲಿ ಭವಿಷ್ಯದಲ್ಲಿ ಒತ್ತು ನೀಡುವಂತೆ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಲೋಕೇಶ್ ಬೆಲ್ಚಡ ಕೊಡ್ಮಣ್, ಶ್ರೀನಿವಾಸ ಕಾಮತ್, ವಿದ್ಯುತ್  ವಿಭಾಗದ ವಿಭಾಗಾಧಿಕಾರಿ ರವೀಂದ್ರ ಎಂ ಕೇಣಿ ಹಾಗೂ ಮೆಕ್ಯಾನಿಕಲ್ ವಿಭಾಗದ ವಿಭಾಗಾಧಿಕಾರಿ ಮೃದುಲ ವಿ, ಮತ್ತಿತರರು ಉಪಸ್ಥಿತರಿದ್ದರು.

Also Read  ಕಾಂಗ್ರೆಸ್‌ ಸೇರಿ ಯೋಗೇಶ್ವರ್ ರಾಜಕೀಯ ಭವಿಷ್ಯ ಹಾಳು ಮಾಡಿಕೊಂಡಿದ್ದಾರೆ- ಅಶೋಕ್ ವಾಗ್ದಾಳಿ

ಸಮಾರೋಪ ಸಮಾರಂಭದಲ್ಲಿ ಕೆನರಾ ಇಂಜಿನಿಯರಿಂಗ್ ಕಾಲೇಜಿನ ಕೃತಕ ಬುದ್ಧಿಮತ್ತೆ ವಿಭಾಗದ ವಿಭಾಗಾಧಿಕಾರಿ ಡಾ. ಬಸಪ್ಪ ಬಿ ಕೊಡಾಡ ಮಾತನಾಡಿ, ಪ್ರಸ್ತುತ ಕಾಲಘಟ್ಟದಲ್ಲಿ ಉದ್ಯೋಗ ಬಯಸುವ ವಿದ್ಯಾರ್ಥಿಗಳು ಮೈಗೂಡಿಸಬೇಕಾದ ಕೌಶಲ್ಯಗಳ ಬಗ್ಗೆ ವಿವರಿಸಿದರು. ಮೆಕ್ಯಾನಿಕಲ್ ವಿಭಾಗದ ಉಪನ್ಯಾಸಕ ಹರೀಶ ಸಿ.ಪಿ ತರಬೇತಿ ವರದಿ ಮಂಡಿಸಿದರು. ಕಾರ್ಯಕ್ರಮದಲ್ಲಿ ಆಟೋಮೊಬೈಲ್ ವಿಭಾಗದ ವಿಭಾಗಾಧಿಕಾರಿ ದೇವರಾಜು ಡಿ, ಕೆಜಿಟಿಟಿಐ ಮಂಗಳೂರು ಸಂಸ್ಥೆಯ ತಾಂತ್ರಿಕ ಸಿಬ್ಬಂದಿ ವರ್ಗದವರು ಹಾಗೂ ಕೆ.ಪಿ.ಟಿ ಸಂಸ್ಥೆಯ ಮೆಕ್ಯಾನಿಕಲ್, ವಿದ್ಯುತ್ ವಿಭಾಗದ ಅಂತಿಮ ವರ್ಷದ 116 ವಿದ್ಯಾರ್ಥಿಗಳು ಭಾಗವಹಿಸಿದ್ದರು.

error: Content is protected !!
Scroll to Top