ಕ್ಷಣಕ್ಕೊಂದು ತಿರುವು ಪಡೆಯುತ್ತಿರುವ ಹಿರಿಯ ನಟಿ ಶ್ರೀದೇವಿ ಸಾವು ಪ್ರಕರಣ ► ದುಬೈ ಪೊಲೀಸರಿಂದ ತೀವ್ರಗೊಂಡ ತನಿಖೆ

(ನ್ಯೂಸ್ ಕಡಬ) newskadaba.com ದುಬೈ, ಫೆ.27. ಶನಿವಾರ ತಡರಾತ್ರಿ ದುಬೈನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಭಾರತದ ಹಿರಿಯ ಬಹುಭಾಷಾ ನಟಿ ಶ್ರೀದೇವಿ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆಯುತ್ತಿದೆ.

ಹೃದಯ ಸ್ಥಂಬನದಿಂದಾಗಿ ಮೃತಪಟ್ಟಿದ್ದಾರೆ‌ ಎಂದು ಮೊದಲು ಹೇಳಲಾಗಿತ್ತಾದರೂ, ಆ ನಂತರ ಬಾತ್ ಟಬ್ ನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಮರಣೋತ್ತರ ಪರೀಕ್ಷೆಯ ವರದಿ ತಿಳಿಸಿತ್ತು. ಈ ನಡುವೆ ಮರಣೋತ್ತರ ಪರೀಕ್ಷೆಯ‌ ವರದಿಯಲ್ಲಿ ಅನುಮಾನ ವ್ಯಕ್ತಪಡಿಸಿರುವ ದುಬೈ ಕಾನೂನು ತಜ್ಞರು ಮೃತದೇಹದ ಹಸ್ತಾಂತರಕ್ಕೆ‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಪುನಃ ಸಂಪೂರ್ಣ ಮರಣೋತ್ತರ ಪರೀಕ್ಷೆ ನಿರ್ಧರಿಸಲಾಗಿದ್ದು, ಶ್ರೀದೇವಿಯವರ ಪತಿ ಬೋನಿ ಕಪೂರ್ ರವರನ್ನು ತೀವ್ರ ತನಿಖೆಗೆ ಒಳಪಡಿಸಿದ್ದಾರೆ.

Also Read  ಕತಾರ್ ಇಂಡಿಯನ್‌ ಸೋಷಿಯಲ್‌ ಫೋರಂ QISF ವತಿಯಿಂದ ಎಂ. ಎಸ್. ಬುಖಾರಿ ಮೆಮೋರಿಯಲ್ ಕಪ್ ಕ್ರೀಡಾ ಕೂಟ

error: Content is protected !!
Scroll to Top