‘ನಿಯಮ ಉಲ್ಲಂಘಿಸಿ ಅರ್ಲಿಂಗ್‌ ಟನ್ ಪವಿತ್ರ ಭೂಮಿಗೆ ಡೊನಾಲ್ಡ್ ಟ್ರಂಪ್ ಅಗೌರವ’ ಕಮಲಾ ಹ್ಯಾರಿಸ್  ಆರೋಪ         



(ನ್ಯೂಸ್ ಕಡಬ) newskadaba.com ವಾಷಿಂಗ್ಟನ್, ಸೆ. 02. ನಿಯಮ ಉಲ್ಲಂಘಿಸಿ ಅರ್ಲಿಂಗ್ ಟನ್ ರಾಷ್ಟ್ರೀಯ ಸಮಾಧಿಯಲ್ಲಿ ಛಾಯಾಚಿತ್ರಗಳನ್ನು ತೆಗೆದು ಪವಿತ್ರ ಭೂಮಿಗೆ ಡೊನಾಲ್ಡ್ ಟ್ರಂಪ್ ಅವರು ಅಗೌರವ ತೋರಿದ್ದಾರೆ ಎಂದು ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹೇಳಿದ್ದಾರೆ.







‘ಅರ್ಲಿಂಗ್‌ ಟನ್ ರಾಷ್ಟ್ರೀಯ ಸಮಾಧಿಯು ಅಮೆರಿಕದ ವೀರರನ್ನು ಗೌರವಿಸಲು ಇರುವ ಸ್ಥಳವಾಗಿದ್ದು, ರಾಜಕೀಯಕ್ಕೆ ಮೀಸಲಿಟ್ಟ ಸ್ಥಳವಲ್ಲ. ರಾಜಕೀಯ ಲಾಭಗೋಸ್ಕರ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪವಿತ್ರ ಭೂಮಿಗೆ ಅಗೌರವ ತೋರಿದ್ದಾರೆ’ ಎಂದು ಆರೋಪಿಸಿದ್ದಾರೆ. ಇದೀಗ ಈ ಘಟನೆಯೇ ವಾಗ್ವಾದಕ್ಕೆ ಕಾರಣವಾಗಿದೆ ಎಂದು ರಾಷ್ಟ್ರೀಯ ಸಮಾಧಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.






 

error: Content is protected !!
Scroll to Top