(ನ್ಯೂಸ್ ಕಡಬ) newskadaba.com ಜಾರ್ಖಂಡ್, ಸೆ. 02. ದೈಹಿಕ ಪರೀಕ್ಷೆಯನ್ನು ಕೈಗೊಳ್ಳುತ್ತಿದ್ದ ವೇಳೆ ಸುಮಾರು 11 ಅಬಕಾರಿ ಕಾನನಸ್ಟೇಬಲ್ ಅಭ್ಯರ್ಥಿಗಳು ಮೃತಪಟ್ಟ ಘಟನೆ ಜಾರ್ಖಂಡ್ ನಲ್ಲಿ ಸಂಭವಿಸಿದೆ.
ಪೊಲೀಸ್ ಮೂಲಗಳ ಪ್ರಕಾರ ಅಬಕಾರಿ ಕಾನ್ಸ್ ಟೇಬಲ್ ಅಭ್ಯರ್ಥಿಗಳ ಸ್ಪರ್ಧಾತ್ಮಕ ಪರೀಕ್ಷೆಗಳ ಅಡಿಯಲ್ಲಿ ಆಗಸ್ಟ್ 22ರಂದು ರಾಂಚಿ, ಗಿರಿದಿಹ್, ಹಜಾರಿಬಾಗ್, ಪಲಮು, ಪೂರ್ವ ಸಿಂಗ್‌ಭೂಮ್ ಮತ್ತು ಸಾಹೇಬ್‌ಗಂಜ್ ಜಿಲ್ಲೆಗಳಾದ್ಯಂತ 7 ಕೇಂದ್ರಗಳಲ್ಲಿ ದೈಹಿಕ ಪರೀಕ್ಷೆಗಳು ನಡೆಸಲಾಗಿತ್ತು. ಈ ಸಂದರ್ಭ ಪಲಮು ಎಂಬಲ್ಲಿ ನಾಲ್ವರು ಮೃತಪಟ್ಟರೆ, ಗಿರಿದಿಹ್ ಮತ್ತು ಹಜಾರಿಬಾಗ್ ನಲ್ಲಿ ತಲಾ ಇಬ್ಬರು ಮತ್ತು ರಾಂಚಿಯ ಜಾಗ್ವಾರ್ ಕೇಂದ್ರ ಮತ್ತು ಪೂರ್ವ ಸಿಂಗ್ ಭೂಮ್ ನ ಮೊಸಬಾನಿ ಮತ್ತು ಸಾಹೇಬ್ ಗಂಜ್ ಕೇಂದ್ರಗಳಲ್ಲಿ ತಲಾ ಒಬ್ಬರು ಮೃತರಾಗಿದ್ದಾರೆ ಕಳೆದ ಆಗಸ್ಟ್ 30 ರವರೆಗೆ ಒಟ್ಟು 1,27,772 ಆಕಾಂಕ್ಷಿಗಳು ದೈಹಿಕ ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 78,023 ಮಂದಿ ತೇರ್ಗಡೆಯಾಗಿದ್ದಾರೆ. ಎಲ್ಲಾ ಕೇಂದ್ರಗಳಲ್ಲಿ ವೈದ್ಯಕೀಯ ತಂಡಗಳು, ಔಷಧಿಗಳು, ಆಂಬ್ಯುಲೆನ್ಸ್ , ಮೊಬೈಲ್ ಶೌಚಾಲಯಗಳು ಮತ್ತು ಕುಡಿಯುವ ನೀರು ಸೇರಿದಂತೆ ಸಾಕಷ್ಟು ವ್ಯವಸ್ಥೆಗಳನ್ನು ಮಾಡಲಾಗಿತ್ತು ಎಂದು ಮೂಲಗಳು ವರದಿ ಮಾಡಿತ್ತು.