ಚಿನ್ನ ದೋಚುತ್ತಿದ್ದ ಮಹಿಳಾ ಶುಂಠಿ ವ್ಯಾಪಾರಿ ಅರೆಸ್ಟ್..!

crime, arrest, suspected

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 30. ಸಂತೆ ಹಾಗೂ ಬಸ್‌‍ಗಳಲ್ಲಿ ಸಂಚರಿಸುವ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಚಿನ್ನಾಭರಣಗಳನ್ನು ದೋಚುತ್ತಿದ್ದ ಶುಂಠಿ ವ್ಯಾಪಾರಿ ಮಹಿಳೆಯೋರರ್ವರನ್ನು ಕೆ.ಆರ್‌.ಪುರ ಠಾಣೆ ಪೊಲೀಸರು ಬಂಧಿಸಿ 40 ಲಕ್ಷ ರೂ. ಮೌಲ್ಯದ 536 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿರುವ ಕುರಿತು ವರದಿಯಾಗಿದೆ.

ಬಂಧಿತ ಮಹಿಳೆಯನ್ನು ಮೂಲತಃ ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಶಾರದಾ ಎಂದು ಗುರುತಿಸಲಾಗಿದೆ.  ಇದರಿಂದಾಗಿ ಈ ಹಿಂದೆ ಚಿಕ್ಕಪೇಟೆ ಹಾಗೂ ತುಮಕೂರಿನ ಗುಬ್ಬಿ ಪೊಲೀಸ್‌‍ ಠಾಣೆಯಲ್ಲಿ ತಲಾ ಒಂದು ಪ್ರಕರಣಗಳು ಹಾಗೂ ನಗರದ ವಿವಿಧ ಪೊಲೀಸ್‌‍ ಠಾಣೆಗಳಲ್ಲಿ ವರದಿಯಾಗಿದ್ದ ಏಳು ಕಳವು ಪ್ರಕರಣಗಳು ಪತ್ತೆಯಾದಂತಾಗಿವೆ.

ತನಿಖೆಯ ವೇಳೆ ಬಟ್ಟೆ ಖರೀದಿಸಲು ಹೋಗಿದ್ದ ವ್ಯಕ್ತಿಯ ಪರ್ಸ್‌ನಿಂದ ಕಳವಾದ ಸುಮಾರು 6 ಸಾವಿರ ರೂ., ಅರಸೀಕೆರೆಯಲ್ಲಿನ ಆರೋಪಿತೆಯ ಸ್ನೇಹಿತನಿಂದ 18 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿ ದ್ದಲ್ಲದೇ ಅಲ್ಲಿನ ಜ್ಯುವೆಲರಿ ಶಾಪ್‌ ನಿಂದ 29 ಗ್ರಾಂ ಚಿನ್ನ, ಮತ್ತೊಂದು ಜ್ಯುವೆಲರಿ ಶಾಪ್‌ ನಿಂದ 135 ಗ್ರಾಂ ಚಿನ್ನ, ಹಾಗೂ ಹರ್ಬನ್‌ ಕೋ ಅಪರೇಟಿವ್‌ ಬ್ಯಾಂಕ್‌ ನಲ್ಲಿ ಅಡವಿಟ್ಟಿದ್ದ 315 ಗ್ರಾಂ ಚಿನ್ನ ಹಾಗೂ ಹಾಸನ ಜಿಲ್ಲಾ ಸಹಕಾರಿ ಬ್ಯಾಂಕ್‌ ನಲ್ಲಿಟ್ಟಿದ್ದ 39 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಇವುಗಳ ಒಟ್ಟು ಮೌಲ್ಯ 40 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ. ಆರೋಪಿತೆಯ ಬಂಧನದಿಂದ ನಗರದ ವಿವಿಧ ಪೊಲೀಸ್‌‍ ಠಾಣೆಗಳಲ್ಲಿ ವರದಿಯಾಗಿದ್ದ 7 ಕಳವು ಪ್ರಕರಣಗಳು ಪತ್ತೆಯಾಗಿರುತ್ತವೆ. ಕೆ.ಆರ್‌.ಪುರ ಠಾಣೆ ಇನ್ಸ್ಪೆಕ್ಟರ್‌ ರಾಮಮೂರ್ತಿ ಹಾಗೂ ಸಿಬ್ಬಂದಿ ತಂಡ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದೆ.

error: Content is protected !!

Join the Group

Join WhatsApp Group