ಉಪ್ಪಳ ನದಿಯಲ್ಲಿ ಜಲಮಟ್ಟ ಹೆಚ್ಚಳ ನದಿ ತೀರವಾಸಿಗಳು ಮುಂಜಾಗ್ರತೆ ವಹಿಸುವಂತೆ ವಿಪತ್ತು ನಿವಾರಣಾ ಪ್ರಾಧಿಕಾರ ಮುನ್ನೆಚ್ಚರಿಕೆ

(ನ್ಯೂಸ್ ಕಡಬ) newskadaba.com ಕಾಸರಗೋಡು, ಆ. 30. ಉಪ್ಪಳ ನದಿಯಲ್ಲಿ ಜಲಮಟ್ಟ ಹೆಚ್ಚುತ್ತಿರುವುದರಿಂದ ನದಿ ತೀರವಾಸಿಗಳು ಮುಂಜಾಗ್ರತಾ ವಹಿಸುವಂತೆ ರಾಜ್ಯ ವಿಪತ್ತು ನಿವಾರಣಾ ಪ್ರಾಧಿಕಾರ ಮುನ್ನೆಚ್ಚರಿಕೆ ನೀಡಿದೆ ಎನ್ನಲಾಗಿದೆ.

ರಾಜ್ಯ ಜಲ ಸಂಪನ್ಮೂಲ ಇಲಾಖೆಯ ಕಾಸರಗೋಡು ಜಿಲ್ಲೆಯ ಸ್ಟೇಶನ್ ನಲ್ಲಿ ಜಲಮಟ್ಟ ಮುನ್ನೆಚ್ಚರಿಕೆ ವ್ಯಾಪ್ತಿ ದಾಟಿರುವುದರಿಂದ ಮಂಜೇಶ್ವರ ನದಿ ತೀರದಲ್ಲಿ ವಾಸಿಸುವವರು ಮುನ್ನೆಚ್ಚರಿಕೆ ವಹಿಸಬೇಕು, ಯಾವುದೇ ಕಾರಣಕ್ಕೆ ನದಿಗೆ ಇಳಿಯುವುದು, ನದಿ ದಾಟುವ ಪ್ರಯತ್ನ ಮಾಡಬಾರದು. ದಿಡೀರ್ ಪ್ರಳಯ ಸಾಧ್ಯತೆ ಇರುವುದರಿಂದ ಅಗತ್ಯ ಬಿದ್ದಲ್ಲಿ ಈ ಪ್ರದೇಶದಿಂದ ತಾತ್ಕಾಲಿಕವಾಗಿ ಸ್ಥಳಾಂತರಗೊಳ್ಳುವಂತೆ ವಿಪತ್ತು ನಿವಾರಣಾ ಪ್ರಾಧಿಕಾರ ನಿರ್ದೇಶನ ನೀಡಿದೆ ಎಂದು ವರದಿ ತಿಳಿಸಿದೆ.

Also Read  ಉಳ್ಳಾಲ: ಸ್ಕೂಟರ್ ಗೆ ಕಾರು ಡಿಕ್ಕಿ ➤ ಸ್ಕೂಟರ್ ಸವಾರ ಗಂಭೀರ

 

 

error: Content is protected !!
Scroll to Top