ವಿವಿಧ ಸೌಲಭ್ಯಗಳಿಗೆ ಮೀನುಗಾರರಿಂದ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 29. ಮೀನುಗಾರಿಕೆ ಇಲಾಖೆ ವತಿಯಿಂದ ಜಿಲ್ಲಾ ವಲಯ ವಿಶೇಷ ಘಟಕ ಯೋಜನೆ, ಮತ್ಸ್ಯ ವಾಹಿನಿ ಯೋಜನೆ ಹಾಗೂ ರಾಜ್ಯ ವಲಯ ಯೋಜನೆ ಕಾರ್ಯಕ್ರಮದಲ್ಲಿ ಮೀನು ಹಿಡಿಯುವ ಸಲಕರಣೆ, ಕಿಟ್ಟುಗಳನ್ನು ಉಚಿತವಾಗಿ ವಿತರಿಸಲು ಮತ್ತು ಕೇಂದ್ರ ಪುರಸ್ಕೃತ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯ ವಿವಿಧ ಕಾರ್ಯಕ್ರಮಗಳಡಿ ಸೌಲಭ್ಯ ಪಡೆಯಲು ಮೀನುಗಾರರಿಂದ, ಮೀನು ಕೃಷಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 10 ಕೊನೆಯ ದಿನ. ಅರ್ಜಿ ಸಲ್ಲಿಸಲು ಮೀನುಗಾರಿಕೆ ಸಹಾಯಕ ನಿರ್ದೇಶಕರು ಜಿಲ್ಲಾ ಪಂಚಾಯತ್ ಆವರಣ ಮೊದಲನೇ ಮಹಡಿ, ರೆಕಾರ್ಡ್ ಬಿಲ್ಡಿಂಗ್, ಉರ್ವ ಸ್ಟೋರ್, ಮಂಗಳೂರು ಅಥವಾ ಮೀನುಗಾರಿಕೆ ಸಹಾಯಕ ನಿರ್ದೇಶಕರು, ಪುತ್ತೂರು ತಾಲೂಕು ಪಂಚಾಯತ್ ಕಾರ್ಯಾಲಯ, ಒಂದನೇ ಮಹಡಿ, ಕೋರ್ಟ್ ರೋಡ್, ಪುತ್ತೂರು ಇಲ್ಲಿಗೆ ಸಂಪರ್ಕಿಸುವಂತೆ ಮೀನುಗಾರಿಕೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Scroll to Top