ಅಡ್ಡೂರು ಸೇತುವೆ ಪರಿಶೀಲನೆ- ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಭೇಟಿ

(ನ್ಯೂಸ್ ಕಡಬ) newskadaba.c0m ಬಂಟ್ವಾಳ, ಆ. 24.  ಅಡ್ಡೂರು ಸೇತುವೆ ಪರಿಶೀಲನೆಗಾಗಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಭೇಟಿ ನೀಡಿದ್ದಾರೆ. ಸೇತುವೆ ಶಿಥಿಲಗೊಂಡ ಹಿನ್ನಲೆಯಲ್ಲಿ ಸೇತುವೆ ಮೂಲಕ ಘನವಾಹನಗಳಿಗೆ ಸಂಚಾರಕ್ಕೆ ನಿಷೇಧವನ್ನು ಜಿಲ್ಲಾಧಿಕಾರಿ ಅದೇಶ ನೀಡಿದ್ದರು.

ಆದರೆ ಇದರಿಂದ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿದ್ದು ಬಸ್ ಸಂಚಾರ ಮಾಡಲು ಅವಕಾಶ ನೀಡುವಂತೆ ಇಲ್ಲಿನ ಸ್ಥಳೀಯರು ಬೇಡಿಕೆಯನ್ನಿಟ್ಟಿದ್ದರು. ಜನರ ಬೇಡಿಕೆಯನ್ನು ಆಲಿಸಿದ ಜಿಲ್ಲಾಧಿಕಾರಿ ಅವರು ಆ.26 ಕ್ಕೆ ಸೇತುವೆಯ ಸಾಮರ್ಥ್ಯವನ್ನು ಪರಿಶೀಲನೆ ನಡೆಸಲು ಪರಿಣತರ ತಂಡ ಆಗಮಿಸಲಿದೆ. ಅವರು ಸೇತುವೆಯ ಸಾಮರ್ಥ್ಯ ಪರಿಶೀಲಿಸಿ ಜಿಲ್ಲಾಡಳಿತಕ್ಕೆ ವರದಿ ನೀಡಿದ ಬಳಿಕ ಮುಂದಿನ ನಿರ್ಧಾರವನ್ನು ಕೈಗೊಳ್ಳಲಿದ್ದೇವೆ. ಅವರೆಗೆ ಜನರು ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ ಎಂದು ವರದಿ ತಿಳಿಸಿದೆ.

Also Read  ದೋಣಿ ಮಗುಚಿ ಬಿದ್ದು ಈದ್ ಆಚರಣೆಗೆ ಬಂದಿದ್ದ ನಾಲ್ವರು ಯುವಕರು ಮೃತ್ಯು

 

 

error: Content is protected !!
Scroll to Top