ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಪಡಿತರ ಚೀಟಿದಾರರು ಇ-ಕೆವೈಸಿ ಮಾಡಲು ಕೊನೆಯ ಅವಕಾಶ – News Kadaba

ಪಡಿತರ ಚೀಟಿದಾರರು ಇ-ಕೆವೈಸಿ ಮಾಡಲು ಕೊನೆಯ ಅವಕಾಶ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 24. ಪಡಿತರ ಚೀಟಿದಾರರು ಪ್ರತೀ ತಿಂಗಳು ಪಡಿತರ ಪಡೆಯುವುದಲ್ಲದೆ ಅನ್ನ ಭಾಗ್ಯ ನೇರ ನಗದು ವರ್ಗಾವಣೆಯ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಸರಕಾರವು ಕಳೆದ 5 ವರ್ಷಗಳಿಂದ ಪಡಿತರ ಚೀಟಿಯಲ್ಲಿರುವ ಎಲ್ಲಾ ಸದಸ್ಯರ ಇ-ಕೆವೈಸಿ ಮಾಡಿಸುವಂತೆ ನಿರ್ದೇಶನ ನೀಡಿದ್ದರೂ ಪಡಿತರ ಚೀಟಿಯಲ್ಲಿ ಹೆಸರು ಇರುವ ಕೆಲವರು ಇನ್ನೂ ಇ-ಕೆವೈಸಿ ಮಾಡದೇ ಇರುವುದು ಕಂಡುಬರುತ್ತಿದೆ. ಸರಕಾರವು ಯಾವುದೇ ಜಿಲ್ಲೆಯ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಮಾಡಲು ಅವಕಾಶ ಕಲ್ಪಿಸಿರುತ್ತದೆ.

ಬಯೋಮೆಟ್ರಿಕ್ ನೀಡಿ ಇ-ಕೆವೈಸಿ ಮಾಡಿಸಲು ಬಾಕಿ ಇರುವ ಸದಸ್ಯರು ಕೂಡಲೇ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಇ-ಕೆವೈಸಿ ಮಾಡಿಸಬೇಕು. ಸರಕಾರವು ಕೊನೆಯ ಅವಕಾಶವಾಗಿ ಈ ತಿಂಗಳ ಅಂತ್ಯದವರೆಗೆ ಅವಕಾಶ ಕಲ್ಪಿಸಿದ್ದು ತಪ್ಪದೆ ಇ-ಕೆವೈಸಿ ಮಾಡಿಸುವಂತೆ ತಿಳಿಸಿದೆ. ವಲಸೆ ಹೋಗಿ ಅಥವಾ ಬೇರೆ ಜಿಲ್ಲೆಗಳಿಗೆ ಕೆಲಸ ನಿಮಿತ್ತ ತೆರಳಿರುವ ವ್ಯಕ್ತಿಗಳು ಅಲ್ಲಿನ ಯಾವುದೇ ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋಮೆಟ್ರಿಕ್  ನೀಡಬಹುದಾಗಿದ್ದು ಈ ಅವಕಾಶವನ್ನು ಸದುಪಯೋಗ ಪಡಿಸಿ ಇ-ಕೆವೈಸಿಯನ್ನು ಮಾಡುವಂತೆ ತಿಳಿಸಿದೆ. ಇದು ಪಡಿತರ ಚೀಟಿದಾರರಿಗೆ ಕೊನೆಯ ಸೂಚನೆಯಾಗಿದೆ. ಆಗಸ್ಟ್ 31 ರ ನಂತರ ಇ-ಕೆವೈಸಿ ಬಾಕಿಯಾಗಿರುವ ಪಡಿತರ ಚೀಟಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಇದುವರೆಗೆ ಇ-ಕೆವೈಸಿ ಮಾಡಿಸದ ಪಡಿತರ ಚೀಟಿದಾರರು ತಮ್ಮ ಸಮೀಪದ ನ್ಯಾಯಬೆಲೆ ಅಂಗಡಿಗಳಲ್ಲಿ ಕೂಡಲೇ ಇ-ಕೆವೈಸಿ ಮಾಡಿಸಿಕೊಳ್ಳಬೇಕು. ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆಯವರೆಗೆ ಇ-ಕೆವೈಸಿ ಮಾಡಿಸಿಕೊಳ್ಳಲು ಅವಕಾಶವಿದೆ. ಪಡಿತರ ಚೀಟಿದಾರರ ಎಲ್ಲಾ ಸದಸ್ಯರ ಬಯೋದೃಢೀಕರಣ ಮಾಡಿಸಬೇಕು, ವಿಶೇಷ ವರ್ಗಕ್ಕೆ ಸೇರಿದವರಾಗಿದ್ದಲ್ಲಿ ಆ ಬಗ್ಗೆ ಧೃಢಪತ್ರ, ಆಧಾರ್ ಸಂಖ್ಯೆ, ಫೋನ್ ನಂಬರ್, ಅಡುಗೆ ಅನಿಲದ ಮಾಹಿತಿ ಹಾಗೂ ಕುಟುಂಬದ ಸದಸ್ಯರ ಸಂಬಂಧವನ್ನು ಸಹ ಇ-ಕೆವೈಸಿಯಲ್ಲಿ ನಮೂದಿಸಬೇಕು. ಬಾಕಿ ಉಳಿದಿರುವ ಸದಸ್ಯರು ಈ ತಿಂಗಳ ಅಂತ್ಯದವರೆಗೆ ಕಾಯದೇ ಕೂಡಲೇ ಇ-ಕೆವೈಸಿ ಮಾಡಿಸಿ ಕೊಂಡು ಪಡಿತರ ಚೀಟಿಯನ್ನು ಮುಂದುವರಿಸಬಹುದಾಗಿದೆ ಎಂದು  ಜಿಲ್ಲಾಧಿಕಾರಿ  ಕಚೇರಿ ಪ್ರಕಟಣೆ ತಿಳಿಸಿದೆ.

Scroll to Top