ರಾತ್ರಿ ವೇಳೆ 1091 ಕ್ಕೆ ಕರೆ ಮಾಡಿದರೆ ಉಚಿತ ಡ್ರಾಪ್- ಸುದ್ದಿ ವೈರಲ್ ; ಪೊಲೀಸ್ ಇಲಾಖೆ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 23. ರಾತ್ರಿ ವೇಳೆ ಒಬ್ಬಂಟಿಯಾಗಿ ಓಡಾಡುವ ಮಹಿಳೆಯರು 1091 ಗೆ ಕರೆ ಮಾಡಿದರೆ, ಪೊಲೀಸರು ಕರೆದೊಯ್ದು ಮನೆಗೆ ಡ್ರಾಪ್‌ ನೀಡುತ್ತಾರೆ ಎಂಬ ಸುದ್ದಿಯನ್ನು ಇತ್ತೀಚೆಗೆ ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಮಾಡಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ರಾಜ್ಯ ಪೊಲೀಸರು ಇದೊಂದು ಸುಳ್ಳು ಸಂದೇಶ ಎಂದು ಸ್ಪಷ್ಟಪಡಿಸಿದ್ದಾರೆ.

 

ರಾತ್ರಿ 10 ಗಂಟೆಯಿಂದ ಮುಂಜಾನೆ 6 ಗಂಟೆ ಅವಧಿಯಲ್ಲಿ ಒಂಟಿಯಾಗಿ ಓಡಾಡುವ ಮಹಿಳೆಯರಿಗೆ ಯಾವುದಾದರೂ ವಾಹನ ದೊರೆಯದೇ ಇದ್ದ ಸಂದರ್ಭ ಸಹಾಯವಾಣಿ 1091 ಗೆ ಕರೆ ಮಾಡಿದರೆ ಪೊಲೀಸರೇ ಖುದ್ದಾಗಿ ವಾಹನದಲ್ಲಿ ಉಚಿತವಾಗಿ ಮನೆಗೆ ಕರೆದೊಯ್ದು ಡ್ರಾಪ್‌ ನೀಡುವ ಕುರಿತು ಕೆಲ ದಿನಗಳ ಹಿಂದೆ ಎಕ್ಸ್‌ ಹಾಗೂ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಲಾಗಿತ್ತು. ಇದಕ್ಕೆ ಸ್ಪಷ್ಟನೆ ನೀಡಿರುವ ಪೊಲೀಸರು ಈ ಯೋಜನೆ ಇಲ್ಲ. ಇದು ಸುಳ್ಳು. ಸಾರ್ವಜನಿಕರು ಇದನ್ನು ನಂಬಬಾರದು. ತುರ್ತು ಸಂದರ್ಭದಲ್ಲಿ 112 ಗೆ ಕರೆ ಮಾಡಿ ಸಹಾಯ ಪಡೆದುಕೊಳ್ಳಬಹುದು ಎಂದು ಹೇಳಿದ್ದಾರೆ. ಹಾಗೂ ಈ ಪೋಸ್ಟ್‌ ಮಾಡಿದ ಕಿಡಿಗೇಡಿಗಳ ವಿರುದ್ಧ ಕೇಸು ದಾಖಲು ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದಾರೆ.

error: Content is protected !!

Join the Group

Join WhatsApp Group