ಬಿಜೆಪಿ ಶಾಸಕ ಯತ್ನಾಳ್ ವಿರುದ್ಧ ಆದೇಶ ಉಲ್ಲಂಘನೆ ಆರೋಪ      ಕೋರ್ಟ್‌ ವಿಚಾರಣೆ ರದ್ದು         

(ನ್ಯೂಸ್ ಕಡಬ) newskadaba.c0m ಬೆಂಗಳೂರು, ಆ. 23.  ಆದೇಶ ಉಲ್ಲಂಘನೆ ಆರೋಪದ ವಿಚಾರವಾಗಿ ಯತ್ನಾಳ್‌ ವಿರುದ್ಧದ ಕೋರ್ಟ್‌ ವಿಚಾರಣೆ ರದ್ದು ಮಾಡಲಾಗಿದೆ. ಕಳೆದ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ‘ಎಲ್ಲ ಹಿಂದುಗಳು ಕಾಂಗ್ರೆಸ್‌ ಪಕ್ಷವನ್ನು ಬಹಿಷ್ಕರಿಸುತ್ತಾರೆ’ ಎಂದು ಯತ್ನಾಳ್ ಹೇಳಿಕೆ ನೀಡಿದ್ದರು.

ಈ ವೀಡಿಯೋ ವೈರಲ್ ಆಗಿದ್ದು, ಈ ಕಾರಣದಿಂದ ಸರ್ಕಾರಿ ಅಧಿಕಾರಿಗಳ ಆದೇಶ ಉಲ್ಲಂಘಿಸಿದ ಆರೋಪ ಸಂಬಂಧ ವಿಜಯಪುರ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿರುದ್ಧ ವಿಚಾರಣಾ ನ್ಯಾಯಾಲಯ ಮೇ 11ರಂದು ಸಮನ್ಸ್‌ ಜಾರಿಗೊಳಿಸಿತ್ತು.

 

Scroll to Top