ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ – ಚಾಲಕರ ಹುದ್ದೆಗೆ ನೇರ ಸಂದರ್ಶನ

(ನ್ಯೂಸ್ ಕಡಬ) newskadaba.com  ಮಂಗಳೂರು, ಆ. 21. ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಕಚೇರಿಯ ಮೊಬೈಲ್ ಐಸಿಟಿಸಿ ವಾಹನ ಚಾಲಕರ ಒಂದು ಹುದ್ದೆಯ ನೇಮಕಾತಿಗಾಗಿ ಅಗಸ್ಟ್ 31ರಂದು ಬೆಳಿಗ್ಗೆ 11:30 ಗಂಟೆಗೆ ಮಂಗಳೂರಿನ ನೆಹರು ಮೈದಾನ ಎದುರು ಇರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ನೇರ ಸಂದರ್ಶನ ನಡೆಯಲಿದೆ.

ಹುದ್ದೆಯು ಹೊರಗುತ್ತಿಗೆ ಆಧಾರದಲ್ಲಿ ನೇಮಕಾತಿಯಾಗಿದ್ದು, 2025 ಮಾರ್ಚ್ 31ರ ಅವಧಿಯವರೆಗೆ ಮಾಸಿಕ ವೇತನ ರೂ. 18000/- ನಿಗದಿಪಡಿಸಲಾಗಿದೆ. ಹುದ್ದೆಗೆ ಅರ್ಜಿ ಸಲ್ಲಿಸುವವರು 10ನೇ ತರಗತಿ ಉತ್ತೀರ್ಣರಾಗಿರಬೇಕು, ಎರಡು ವರ್ಷಗಳ ಭಾರಿ ವಾಹನ ಚಾಲನೆಯ ಅನುಭವ ಹೊಂದಿರಬೇಕು. ಎಚ್‍ಐವಿ, ಏಡ್ಸ್ ಸೋಂಕಿತ/ ಭಾದಿತರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಚಾಲನಾ ಪರವಾನಿಗೆ ನಕಲು ಪ್ರತಿ, ವಿದ್ಯಾರ್ಹತೆ ಪ್ರಮಾಣ ಪತ್ರದ ಪ್ರತಿ, ಆಧಾರ ಕಾರ್ಡು ನಕಲು ಪ್ರತಿ, ಚಾಲನ ಅನುಭವ ಪ್ರಮಾಣ ಪತ್ರ, ಎಚ್‍ಐವಿ ಸೋಂಕಿತ / ಬಾಧಿತರಾಗಿದ್ದರೆ ಎ.ಆರ್.ಟಿ ಕೇಂದ್ರದ ನೋಂದಣಿ ಪುಸ್ತಕದ ಪ್ರತಿಯನ್ನು ಲಗತ್ತಿಸಬೇಕು. ಅಜ್ಜಿಯನ್ನು ಅಭ್ಯರ್ಥಿಗಳು ತಮ್ಮ ಕೈ ಬರಹದಿಂದ ಭರ್ತಿ ಮಾಡಬೇಕು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಮತ್ತು ಪ್ರತಿಬಂಧಕ ಘಟಕದ ಮೇಲ್ವಿಚಾರಕರು ಮಹೇಶ್ ಯು.ಕೆ ಮೊಬೈಲ್ ಸಂಖ್ಯೆ 9449846983 ಸಂಪರ್ಕಿಸುವಂತೆ ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..

Scroll to Top