ಬಂಟ್ವಾಳ: ದೇವರಾಜ್ ಅರಸ್ 109ನೇ ಜನ್ಮದಿನ ಆಚರಣೆ

(ನ್ಯೂಸ್ ಕಡಬ) newskadaba.c0m ಬಂಟ್ವಾಳ, ಆ. 20. ದೇವರಾಜ್ ಅರಸ್ 109 ನೇ ಜನ್ಮದಿನಾಚರಣೆಯನ್ನು ಬಂಟ್ವಾಳ ತಾಲೂಕು ಪಂಚಾಯತ್, ಬಂಟ್ವಾಳ ಪುರಸಭೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬಂಟ್ವಾಳ ಇವರ ಆಶ್ರಯದಲ್ಲಿ ಇಂದು ಬಿ.ಸಿ.ರೋಡಿನ ತಾ.ಪಂ. ಎಸ್ ಜೆ ಎಸ್ ಆರ್ ವೈ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಂಟ್ವಾಳ ತಾಲೂಕು ತಹಶೀಲ್ದಾರ್ ಅರ್ಚನಾ ಭಟ್ ಅವರು, ವಿದ್ಯಾರ್ಥಿಗಳು ದೇವರಾಜು ಅರಸು ಅವರ ದೂರದೃಷ್ಟಿಯ ಚಿಂತನೆಗಳ ಬಗ್ಗೆ ಅಧ್ಯಯನ ನಡೆಸಿ, ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಯುವಶಕ್ತಿ ದೇಶದ ಬಹುದೊಡ್ಡ ಆಸ್ತಿ, ಇದನ್ನು ನಮ್ಮ ಯುವ ಸಮಾಜ ಅರಿತುಕೊಂಡು ದೇಶದ ಬಗ್ಗೆ ಚಿಂತಿಸಿ, ಕಾರ್ಯಪ್ರವೃತ್ತರಾಗಬೇಕು. ಅರಸು ಅವರು ಹಾಕಿಕೊಟ್ಟ ಹಲವು ಆದರ್ಶಗಳು ಎಲ್ಲರಿಗೂ ಪ್ರೇರಣೆಯಾಗಲಿ ಎಂದು ಹಾರೈಸಿದರು.

Also Read  ಉಡುಪಿ : ಸಾಲ ಬಾಧೆಯಿಂದ ಮೀನುಗಾರ ಆತ್ಮಹತ್ಯೆಗೆ ಶರಣು.!

 

error: Content is protected !!
Scroll to Top