ಕರಾವಳಿ ಪೊಲೀಸ್ ಪಡೆಯಲ್ಲಿ ಖಾಲಿ ಹುದ್ದೆಗಳು ► ಸಿಬ್ಬಂದಿ ನೇಮಕಾತಿಗೆ ಅರ್ಜಿ ಆಹ್ವಾನ

ಸಾಂದರ್ಭಿಕ ಚಿತ್ರ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ.23. ಕರಾವಳಿ ಪೊಲೀಸ್ ಪಡೆಯಲ್ಲಿ ಖಾಲಿ ಇರುವ ವಿವಿಧ ತಾಂತ್ರಿಕ ಹುದ್ದೆಗಳಿಗೆ ನೇಮಕಾತಿ ನಡೆಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಯ ಅವಧಿಯು 5 ವರ್ಷಗಳಾಗಿದ್ದು, ಗುತ್ತಿಗೆ ಆಧಾರದಲ್ಲಿ ನೇಮಕಾತಿ ನಡೆಯಲಿದೆ. ಖಾಲಿ ಇರುವ ಹುದ್ದೆಗಳ ವಿವರ ಕೆಳಗಿನಂತಿವೆ. ಮೋಟಾರ್ ಲಾಂಚ್ ಇಂಜಿನಿಯರ್ (ಪೊಲೀಸ್ ಇನ್ಸ್‌ಪೆಕ್ಟರ್ ಗ್ರೇಡ್), ಬೋಟ್ ಕ್ಯಾಪ್ಟನ್(ಸಬ್ ಇನ್ಸ್‌ಪೆಕ್ಟರ್ ಗ್ರೇಡ್), ಅಸಿಸ್ಟೆಂಟ್ ಕ್ಯಾಪ್ಟನ್ (ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ ಗ್ರೇಡ್),  ಮೋಟಾರ್ ಲಾಂಚ್ ಮೆಕ್ಯಾನಿಕ್ (ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ ಗ್ರೇಡ್), ಇಂಜಿನ್ ಡ್ರೈವರ್ (ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಗ್ರೇಡ್), ಖಲಾಸಿ (ಪೊಲೀಸ್ ಕಾನ್ಸ್‌ಟೇಬಲ್ ಗ್ರೇಡ್).  ಈಗಾಗಲೇ ನೌಕಾಪಡೆ/ಕೋಸ್ಟ್ ಗಾರ್ಡ್ ಅಥವಾ ಹಾಗೂ ಬಿ.ಎಸ್.ಎಫ್. ಜಲ ಘಟಕದಲ್ಲಿ  ಯೋಧನಾಗಿ ನಿವೃತ್ತಿ ಹೊಂದಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಮಾರ್ಚ್ 19 ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗಳಿಗಾಗಿ 0820-2538120, 2538150 ಸಂಖ್ಯೆಯನ್ನು ಸಂಪರ್ಕಿಸಲು ಕರಾವಳಿ ಭದ್ರತಾ ಪೊಲೀಸ್ ಎಸ್ಪಿ ಕೆ.ಟಿ. ಬಾಲಕೃಷ್ಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಅಂಗನವಾಡಿ ಕೇಂದ್ರದಲ್ಲಿ ಭರ್ಜರಿ ಉದ್ಯೋಗಾವಕಾಶ - ಆಸಕ್ತರಿಂದ ಅರ್ಜಿ ಆಹ್ವಾನ

error: Content is protected !!
Scroll to Top