ವಿದ್ಯುತ್ ಶಾಕ್ ತಗುಲಿ ಯುವಕನೋರ್ವ ಮೃತ್ಯು..!

(ನ್ಯೂಸ್ ಕಡಬ) newskadaba.c0m ಕಾಸರಗೋಡು, ಆ. 20.  ವಿದ್ಯುತ್ ಶಾಕ್ ತಗುಲಿ ಯುವಕನೋರ್ವ ಮೃತಪಟ್ಟ ಘಟನೆ ಮಂಜೇಶ್ವರ ಹೊಸಬೆಟ್ಟುವಿನಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಯಶವಂತ (21) ಎಂದು ಗುರುತಿಸಲಾಗಿದೆ.

ಸಂಜೆ ಮನೆಯ ಟೆರೇಸ್ ನಲ್ಲಿ ಬಿದ್ದಿದ್ದ ಮಡಲನ್ನು ತೆಗೆಯಲು ತೆರಳಿದ್ದ ಯಶವಂತ, ಮರದ ಹತ್ತಿರದಲ್ಲೇ ಹಾದು ಹೋಗಿದ್ದ ಹೈಟೆನ್ಷನ್ ತಂತಿಯಿಂದ ಶಾಕ್ ತಗುಲಿ ಅಲ್ಲೇ ಕುಸಿದು ಬಿದ್ದಿದ್ದಾನೆ. ಯಶವಂತ ಸುಮಾರು ಹೊತ್ತು ಕಳೆದರೂ ಮರಳಿ ಬಾರದ ದಿದ್ದುದರಿಂದ ಸಹೋದರಿ ಟೆರೇಸ್ ಗೆ ಹತ್ತಿ ನೋಡಿದಾಗ ಯಶವಂತ ಬಿದ್ದಿರುವುದು ಕಂಡುಬಂದಿದೆ ಎಂದು ವರದಿ ತಿಳಿಸಿದೆ.

Also Read  ಲಷ್ಕರ್ - ಎ - ತೋಯ್ಬಾ ಉಗ್ರರನ್ನು ಸದೆಬಡಿದ ತಂಡದಲ್ಲಿ ತುಳುನಾಡಿನ ವೀರ ಯೋಧ ► ಕಡಬ ತಾಲೂಕಿಗೆ ಹೆಮ್ಮೆಯ ಕಿರೀಟವನ್ನು ತಂದಿತ್ತ ವೀರ ಯೋಧ ಝುಬೈರ್ ನೇರೆಂಕಿ

 

 

error: Content is protected !!
Scroll to Top