ರಾಯಚೂರಿನ ಈ ದರ್ಗಾದಲ್ಲಿ ಗೋರಿ ಉಸಿರಾಡುತ್ತಿದೆಯಂತೆ..!! ವೈರಲ್ ಸುದ್ದಿ ಬೆನ್ನಲ್ಲೇ ಭಕ್ತರ ದೌಡು

(ನ್ಯೂಸ್ ಕಡಬ) newskadaba.com ರಾಯಚೂರು, ಆ. 20. ರಾಯಚೂರಿನ ಆನೆಹೊಸೂರು ಗ್ರಾಮದಲ್ಲಿಅಂತ್ಯ ವಿಶ್ರಾಂತಿ ಹೊಂದುತ್ತಿರುವ ಇಸ್ಲಾಂ ಧರ್ಮಗುರುಗಳ ಗೋರಿಗಳು ಉಸಿರಾಡುತ್ತಿವೆ ಎಂಬ ಬಗ್ಗೆ ‌ ಸುದ್ದಿ ವೈರಲ್ ಆದ ಹಿನ್ನೆಲೆ ಆ ಗೋರಿಗಳ ವೀಕ್ಷಣೆಗೆ ಸಾವಿರಾರು ಭಕ್ತರು ತಂಡೋಪತಂಡವಾಗಿ ಆಗಮಿಸುತ್ತಿರುವ ಘಟನೆ ವರದಿಯಾಗಿದೆ.

 

ರಾಯಚೂರಿನ ಲಿಂಗಸ್ಗೂರು ತಾಲೂಕಿನ ಆನೆಹೊಸೂರು ಗ್ರಾಮದ ಸೈಯದ್ ಶಾ ನಸರುದ್ದೀನ್ ನಬಿರಾ ಖಾದ್ರಿ ದರ್ಗಾದಲ್ಲಿನ ಇತ್ತೀಚೆಗೆ ಉರೂಸ್ ನಡೆದಿದ್ದು, ಆ ಬಳಿಕ 40 ದಿನಗಳ ಕಾಲ ಇಂಥದ್ದೊಂದು ಪವಾಡ ಸಂಭವಿಸಿದೆ ಎಂಬುದಾಗಿ ಜನರು ಹೇಳುತ್ತಿದ್ದಾರೆ. ನೂರಾರು ವರ್ಷಗಳ 3 ಹಳೆ ಗೋರಿಗಳು ಉಸಿರಾಟ ನಡೆಸಿದಂತೆ ಅಲ್ಲಿಗೆ ಭೇಟಿ ನೀಡುತ್ತಿರುವ ಭಕ್ತರಿಗೆ ಭಾಸವಾಗುತ್ತಿದೆಯಂತೆ. ಅದರ ವಿಡಿಯೊಗಳು ಸಾರ್ವಜನಿಕವಾಗಿ ಹರಿದಾಡುತ್ತಿದೆ. ಇದೀಗ ಈ ಕೌತುಕಕಾರಿ ಘಟನೆಯನ್ನು ವೀಕ್ಷಿಸಲು ಸಾವಿರಾರು ಮಂದಿ ದರ್ಗಾಕ್ಕೆ ಭೇಟಿ ನೀಡುತ್ತಿದ್ದು, ಈ ದರ್ಗಾದಲ್ಲಿ ಭಾರೀ ಜನಸಂದಣಿ ಕಂಡುಬರುತ್ತಿದೆ ಎಂದೆನ್ನಲಾಗಿದೆ.

error: Content is protected !!
Scroll to Top