ವರ ನಾಪತ್ತೆ..!    ಮದುವೆ ರದ್ದು..!      

(ನ್ಯೂಸ್ ಕಡಬ) newskadaba.c0m ಉಡುಪಿ, ಆ. 20.  ಮದುವೆ ಹಿಂದಿನ ದಿನ ಮದುಮಗ ನಾಪತ್ತೆಯಾದ ಕಾರಣ ಮದುವೆ ರದ್ದಾದ ಘಟನೆ ನಡೆದಿದೆ. ಅಳಿವೆಕೋಡಿ ಗ್ರಾಮದ ವರನೊಂದಿಗೆ ಉಪ್ಪುಂದ ಗ್ರಾಮದ ಯುವತಿಯ ಮದುವೆ ನಾಗೂರಿನಲ್ಲಿ ನಡೆಯಲಿತ್ತು. ಹುಡುಗ ಖಾಸಗಿ ಸಂಸ್ಥೆಯಲ್ಲಿ ವೃತ್ತಿಯಲ್ಲಿದ್ದ. ಈ ಹಿಂದೆ ಎರಡು ಕಡೆಯ ಮನೆಯವರು ಸೇರಿ ಮದುವೆ ನಿಶ್ಚಯಿಸಿದ್ದರು.

ಹುಡುಗನ ಮನೆಯಲ್ಲಿ ಮೆಹಂದಿ ಕಾರ್ಯಕ್ರಮ ನಡೆಸಲು ಸಿದ್ಧತೆ ನಡೆದಿತ್ತು. ಮದುಮಗ ಆ.18ರಂದು ಮದುವೆಗೆ ಅಗತ್ಯವಿರುವ ಚಿನ್ನಾಭರಣಗಳನ್ನು ಅಂಗಡಿಯಿಂದ ಪಡೆದು, ಚಿನ್ನಾಭರಣ ಗಳನ್ನು ಮನೆಯಲ್ಲಿಟ್ಟು ಕೆಲವು ವಸ್ತುಗಳನ್ನು ತರಲು ಇದೆ ಎಂದು ಮನೆ ಯವರಲ್ಲಿ ಹೇಳಿ, ಮೊಬೈಲ್‌, ಕೈಯಲ್ಲಿದ್ದ ಚಿನ್ನದ ಬ್ರಾಸ್‌ಲೇಟ್‌ ಅನ್ನು ಮನೆಯಲ್ಲೇ ಬಿಟ್ಟು ಹೋಗಿದ್ದಾನೆ ಎಂದು ವರದಿಯಾಗಿದೆ.

Also Read  ಆಯಿಶಾ ಕಾಲೇಜು ಆತೂರು ಶೇ. 100 ಫಲಿತಾಂಶ

 

 

error: Content is protected !!
Scroll to Top