ಗಾಂಜಾ ಸೇವನೆಯಿಂದ ದುಷ್ಕರ್ಮಿಗಳ ದಾಳಿ         ಇಬ್ಬರ ಸ್ಥಿತಿ ಗಂಭೀರ..! ಇಬ್ಬರು ಅರೆಸ್ಟ್..!

(ನ್ಯೂಸ್ ಕಡಬ) newskadaba.c0m ಕುಂದಾಪುರ, ಆ. 19.  ಗಾಂಜಾ ಅಮಲಿನಲ್ಲಿದ್ದ ಸುಮಾರು ಹತ್ತು ಮಂದಿ ದುಷ್ಕರ್ಮಿಗಳ ತಂಡವೊಂದು ನಡೆಸಿದ ತಲವಾರು ದಾಳಿಯಲ್ಲಿ ಆರು ಮಂದಿ ಗಾಯಗೊಂಡ ಘಟನೆ ಕುಂದಾಪುರದ ಸಮೀಪದ ವಕ್ವಾಡಿಯಲ್ಲಿ ನಡೆದಿದೆ. ಗಾಯಾಳುಗಳ ಪೈಕಿ ಇಬ್ಬರ ಸ್ಥಿತಿ ತೀವ್ರ ಗಂಭೀರವಾಗಿದೆ ಎನ್ನಲಾಗಿದೆ.

ಚಂದ್ರಶೇಖರ್ (27) ಹಾಗೂ ಅಶೋಕ್ ದೇವಾಡಿಗ (45) ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರೋಪಿಗಳನ್ನು ವಕ್ವಾಡಿಯ ಆದರ್ಶ, ಎಡ್ವರ್ಡ್, ಗಣೇಶ್ ಕುಂಭಾಶಿ, ಗೋವರ್ಧನ್ ಹಾಗೂ ಇತರ ಎಂಟು ಜನರು ಎಂದು ಗುರುತಿಸಲಾಗಿದೆ. ಈ ಪೈಕಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಇತರರು ತಲೆಮರೆಸಿಕೊಂಡಿದ್ದು ಕುಂದಾಪುರ ನಗರ ಪೊಲೀಸರು ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ವರದಿ ಪ್ರಕಟಣೆ ತಿಳಿಸಿದೆ.

Also Read  ಕಡಬ ತಾಲೂಕು ಉದ್ಘಾಟನೆ ಮುಂದೂಡಿರುವುದು ನೋವು ತಂದಿದೆ ► ಕೂಡಲೇ ತಾಲೂಕು ಅನುಷ್ಠಾನಕ್ಕೆ ಸರಕಾರ ಮುಂದಾಗಬೇಕು: ಕೃಷ್ಣ ಶೆಟ್ಟಿ

 

 

error: Content is protected !!
Scroll to Top